ಭೋಪಾಲ್: ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು 67,490 ನಾಣ್ಯಗಳನ್ನು ನೀಡಿ ಹೊಂಡಾ ಆಕ್ಟೀವಾ ಖರೀದಿಸಿದ್ದಾರೆ.
ಸತ್ನಾ ನಿವಾಸಿಯಾಗಿರುವ ರಾಕೇಶ್‍ರಿಗೆ ದ್ವಿಚಕ್ರ ವಾಹನ ಬೇಕಾಗಿತ್ತು. ಈ ವೇಳೆ ಅವರು ಹೊಂಡಾ ಆಕ್ಟೀವಾ ಖರೀದಿಸಲು ನಿರ್ಧರಿಸುತ್ತಾರೆ. ಬಳಿಕ ನಾಣ್ಯಗಳು ತುಂಬಿರುವ ಬ್ಯಾಗ್ ತೆಗೆದುಕೊಂಡು ‘ಕೃಷ್ಣ ಹೊಂಡಾ ಡೀಲರ್ ಶಿಪ್’ಗೆ ಹೋಗುತ್ತಾರೆ.
Advertisement
Advertisement
ರಾಕೇಶ್ ಆಕ್ಟೀವಾ 125BSVI ಖರೀದಿಸಲು ನಿರ್ಧರಿಸಿದ್ದರು. ಆಕ್ಟೀವಾ ಖರೀದಿಸಿ 67,490 ರೂ. ಅನ್ನು ನಾಣ್ಯದ ರೂಪದಲ್ಲಿ ಪೇಮೆಂಟ್ ಮಾಡಿದ್ದಾರೆ. ರಾಕೇಶ್ ನೀಡಿದ ನಾಣ್ಯದ ಹಣವನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ಮೂರು ಗಂಟೆ ಬೇಕಾಯಿತು. ಇದನ್ನೂ ಓದಿ: ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ರಾಕೇಶ್, ಬೇರೆ ಕುಟುಂಬಗಳಂತೆ ನನಗೂ ಹಾಗೂ ನನ್ನ ಕುಟುಂಬದವರಿಗೂ ದೀಪಾವಳಿ ಹಬ್ಬ ತುಂಬಾನೇ ಮುಖ್ಯ. ದನ್ತೇರಸ್(ಚಿನ್ನ ಅಥವಾ ಹೊಸ ವಸ್ತು ಖರೀದಿಸುವ ದಿನ) ದಿನದಂದು ನನಗೆ ನಾನೇ ನೀಡಿದ ಉಡುಗೊರೆ ಇದು ಎಂದು ಹೇಳಿದ್ದಾರೆ.
ಈ ಹಿಂದೆ ರಾಜಸ್ಥಾನದ ಜೋಧ್‍ಪುರ್ ನಲ್ಲಿ 17 ವರ್ಷದ ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500ರೂ ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದನು. 13,500 ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ನಾಲ್ಕು ಗಂಟೆ ಬೇಕಾಯಿತು.