ಬೀಜಿಂಗ್: ವಾಹನ ಚಾಲನೆ ಮಾಡುವಾಗ ಫೋನ್ ಬಳಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಇದೇ ಕಾರಣದಿಂದ ಒಂದಲ್ಲ ಒಂದು ಅಪಘಾತ ಆಗುತ್ತಲೇ ಇರುತ್ತೆ. ಹೀಗೇ ಡ್ರೈವಿಂಗ್ ಮಾಡುವಾಗ ಫೋನ್‍ನಲ್ಲಿ ಬ್ಯುಸಿಯಾಗಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸೀದಾ ರಸ್ತೆಯಲ್ಲಿ ತೆರೆದುಕೊಂಡಿದ್ದ ಗುಂಡಿಯೊಳಗೆ ಬೀಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
Advertisement
ಚೀನಾದ ಗುವಾಂಗ್ಸಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬೇಜೈ ನಗದರಲ್ಲಿ ರಸ್ತೆ ಇದ್ದಕ್ಕಿದ್ದಂತೆ ಕುಸಿದು ಸುಮಾರು 32 ಅಡಿ ಅಗಲ ಹಾಗೂ 6 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ರಸ್ತೆ ಕುಸಿಯುವ ದೃಶ್ಯವನ್ನ ವಿಡಿಯೋದಲ್ಲಿ ಕಾಣಬಹುದು. ಬಳಿಕ ದ್ವಿಚಕ್ರವಾಹನ ಸವಾರನೊಬ್ಬ ಫೋನ್ ನೋಡುತ್ತಾ ಚಾಲನೆ ಮಾಡಿಕೊಂಡು ಬಂದಿದ್ದು, ರಸ್ತೆ ಕುಸಿದಿರೋದನ್ನ ಗಮನಿಸದೇ ಸೀದಾ ಗುಂಡಿಯೊಳಗೆ ಬಿದ್ದಿದ್ದಾನೆ.
Advertisement
Advertisement
ಇಲ್ಲಿನ ಪತ್ರಿಕೆಯೊಂದರ ವರದಿಯ ಪ್ರಕಾರ ಸವಾರನಿಗೆ ಯಾವುದೇ ಗಾಯಗಳಾಗದೇ ಬಚಾವಾಗಿದ್ದು, ಗುಂಡಿಯಿಂದ ಮೇಲೆ ಹತ್ತಿ ಬಂದಿದ್ದಾನೆ ಎನ್ನಲಾಗಿದೆ. ಆದ್ರೂ ಡ್ರೈವಿಂಗ್ ಮಾಡುವಾಗ ಫೋನ್ ಬಳಸಬಾರದು ಎಂದು ಹೇಳೋದು ಯಾಕೆ ಅಂತ ಈ ವಿಡಿಯೋ ನೋಡಿಯಾದ್ರೂ ತಿಳಿದುಕೊಳ್ಳಬೇಕು.
Advertisement
https://www.youtube.com/watch?v=9udAh–50sQ