ಹೈದರಾಬಾದ್: ಪ್ರೀತಿಯನ್ನು ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಮೌಲಾನಾ ಸಾಹೇಬ್ ಎಂಬ ಯುವಕ ಅಪ್ರಾಪ್ತೆಗೆ ಬೆಂಕಿ ಹಚ್ಚಿದ್ದಾನೆ. ಕರ್ನೂಲ್ ಜಿಲ್ಲೆಯ ಕೌತಾಲಂ ಮಂಡಲದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ಕೌತಾಲಂ ಪ್ರದೇಶದ 12 ವರ್ಷದ ಬಾಲಕಿಯೊಬ್ಬಳನ್ನು ಮೌಲಾನಾ ಪ್ರೀತಿಸುತ್ತಿದ್ದನು. ಆದರಿಂದ ಕಳೆದ ಕೆಲವು ತಿಂಗಳಿಂದ ಬಾಲಕಿಗೆ ಪ್ರೀತಿ ಪ್ರೇಮವೆಂದು ಯುವಕ ಪೀಡಿಸುತ್ತಿದ್ದನು.
Advertisement
Advertisement
ಬಾಲಕಿಗೆ ಯುವಕನನ್ನು ಪ್ರೀತಿಸಲು ಇಷ್ಟವಿರಲಿಲ್ಲ. ಎಷ್ಟೇ ಬಾರಿ ಯುವಕ ಪ್ರೀತಿ ಮಾಡು ಎಂದು ಕಾಟಕೊಡುತ್ತಿದ್ದರೂ ಬಾಲಕಿ ನಾನು ಪ್ರೀತಿ ಮಾಡಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ತನ್ನ ಪ್ರೀತಿಯನ್ನು ಬಾಲಕಿ ಒಪ್ಪಲಿಲ್ಲ ಎಂದು ಯುವಕ ಮನನೊಂದಿದ್ದನು. ಹಾಗೆಯೇ ಬಾಲಕಿ ಮೇಲೆ ಹುಚ್ಚು ಪ್ರೀತಿ ಇಟ್ಟಿದ್ದ ಯುವಕ ಆಕೆಯನ್ನು ಪಡೆಯಲೆಬೇಕು ಎಂದು ಹಟಕ್ಕೆ ಬಿದ್ದಿದ್ದನು.
Advertisement
Advertisement
ಶುಕ್ರವಾರ ರಾತ್ರಿ ವೇಳೆ ಬಾಲಕಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯುವಕ ಆಕೆಯನ್ನು ತಡೆದು ತನ್ನನ್ನು ಪ್ರೀತಿ ಮಾಡಲೇ ಬೇಕು ಎಂದು ಬೆದರಿಸಿದ್ದಾನೆ. ಅದ್ಯಾವುದಕ್ಕೂ ಬಾಲಕಿ ಒಪ್ಪದೇ ಇದ್ದಾಗ ನಡುರಸ್ತೆಯಲ್ಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆಗ ಬಾಲಕಿಯ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಬಂದ ಜನರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಅಪ್ರಾಪ್ತ ಬಾಲಕಿ ಮೇಲೆ ಕೊಲೆ ಯತ್ನ ಮಾಡಿದಕ್ಕೆ ಆರೋಪಿ ಮೇಲೆ ಪೊಲೀಸರು ನಿರ್ಭಯ ಕಾಯ್ದೆ ಪ್ರಕಾರ ಕೊಲೆ ಪ್ರಕರಣ ದಾಖಲಿಸಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv