ತನ್ನ ಸಮಾಧಿ ತಾನೇ ನಿರ್ಮಿಸಿಕೊಂಡಿದ್ದ ಸ್ವಾಭಿಮಾನಿ

Public TV
2 Min Read
chamarajnagar burial

ಚಾಮರಾಜನಗರ: ಸಾಮಾನ್ಯವಾಗಿ ಸ್ವಾಮೀಜಿಗಳು ತಾವು ನಿಧನವಾಗುವ ಮುನ್ನೆವೆ ಮಠದಲ್ಲಿ ಅವರ ಸಮಾಧಿಯನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 20 ವರ್ಷದ ಹಿಂದೆಯೆ ತನ್ನ ಸಮಾಧಿ ನಿರ್ಮಾಣ ಮಾಡಿಕೊಂಡಿದ್ದು, ಇಂದು ಆ ಸಮಾಧಿಯಲ್ಲೆ ಅವರ ಅಂತ್ಯಕ್ರಿಯೆ ನೆರವೇರಿತು.

ಚಾಮರಾಜನಗರ ತಾಲೂಕಿನ ನಂಜೇದೇವನಪುರ ನಿವಾಸಿ ಪುಟ್ಟನಂಜನಪ್ಪ (85) ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ನಿನ್ನೆ ರಾತ್ರಿ ಸಾವನಪ್ಪಿದ್ದಾರೆ. ಆದರೆ ಇವರು ಸಾಯುವ ಮುನ್ನೆವೆ ಸಮಾಧಿ ಮಾಡಿಕೊಂಡಿದ್ದು ವಿಶೇಷವಾಗಿದೆ. ಈ ರೀತಿಯ ಸಮಾಧಿಗಳನ್ನು ಸಾಮಾನ್ಯವಾಗಿ ಮಠಗಳಲ್ಲಿ ಸ್ವಾಮೀಜಿಗಳು ನಿರ್ಮಾಣ ಮಾಡಿಕೊಂಡಿರುತ್ತಾರೆ. ಅಂತಹ ಸಮಾಧಿಯಲ್ಲಿ ಅವರು ಕಾಲವಾದಾಗ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಆದರೆ ಪುಟ್ಟನಂಜಪ್ಪ ತಮ್ಮ ಜಮೀನಲ್ಲೆ 20 ವರ್ಷದ ಹಿಂದೆಯೆ ತಮ್ಮ ಸಮಾಧಿಯನ್ನ ಕಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣೆ ವರ್ಷ ಇದು, ಏನೇ ಮಾಡಿದರೂ ಪಕ್ಷಕ್ಕೆ ಲಾಭ: ಕೆ.ಎನ್ ರಾಜಣ್ಣ

chamarajnagar burial 1

ಸಮಾಧಿ ಕಟ್ಟಿಸಿಕೊಂಡು ಅಲ್ಲಿಗೆ ಮರಳನ್ನು ತುಂಬಿಸಿದ್ರಂತೆ. ನಿನ್ನೆ ಸಾವನಪ್ಪಿದ್ದರಿಂದ ಇಂದು ಆ ಸಮಾಧಿಗೆ ತುಂಬಿದ್ದ ಮರಳನ್ನು ತೆಗೆದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದಷ್ಟೆ ಅಲ್ಲದೆ ಅಂತ್ಯಕ್ರಿಯೆಗೆ ಬೇಕಾಗುವಂತ ವಿಭೂತಿ ಕಳಸ, ಸೇರಿದಂತೆ ಇತರೆ ಪೂಜಾ ಸಾಮಾಗ್ರಿಗಳು ತೆಗೆದಿಟ್ಟಿದ್ದರಂತೆ. ಅಷ್ಟೆ ಅಲ್ಲದೆ ತಮ್ಮ 11 ನೇ ದಿನದ ತಿಥಿ ಕಾರ್ಯಕ್ಕು ಕೂಡ ಒಂದೂವರೆ ಲಕ್ಷ ಹಣವನ್ನು ಸಹ ತೆಗೆದಿಟ್ಟಿದ್ದರಂತೆ. ಇದನ್ನೂ ಓದಿ: ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ- ಬಿಜೆಪಿಗರಿಗೆ ಜಮೀರ್ ಟಾಂಗ್

ಅಷ್ಟಕ್ಕೂ ಅವರು ಈ ರೀತಿ ಸಮಾಧಿ ನಿರ್ಮಾಣ ಮಾಡಿಕೊಳ್ಳಲು ಕಾರಣ ಇದೆಯಂತೆ. ಪುಟ್ಟನಂಜಪ್ಪರಿಗೆ ಮೂವರು ಮಕ್ಕಳಿದ್ದು, ಈಗಾಗಲೇ ಅವರಿಗೆ ಸಮಾನಾವಾಗಿ ತಮ್ಮ ಆಸ್ತಿಯನ್ನ ಹಂಚಿಕೆ‌ ಮಾಡಿದ್ದಾರಂತೆ. ಇದರಿಂದ ತಾವು ಸಾವನಪ್ಪಿದ ಸಂಧರ್ಭದಲ್ಲಿ ಮಕ್ಕಳಿಗೆ ಹಣ ವಿಚಾರವಾಗಿ ಯಾವುದೇ ತೊಂದರೆಯಾಗಬಾರದು ಅನ್ನೋ ಒಂದು ಕಾರಣವಾದ್ರೆ, ಅವರ ಪತ್ನಿಯ ಸಮಾಧಿ ಪಕ್ಕದಲ್ಲೆ ತಮ್ಮ ಸಮಾಧಿ ಇರಬೇಕು‌ ಎಂಬುದು ಅವರ ಆಸೆಯಾಗಿತ್ತಂತೆ. ಒಟ್ಟಾರೆ, ಪುಟ್ಟನಂಜಪ್ಪ ತಾವು ಸತ್ತಮೇಲು ತನ್ನ ಮಕ್ಕಳಿಗೆ ತೊಂದರೆಯಾಗಬಾರದು ಅನ್ನೋ ಕಾರಣದಿಂದ ತಮ್ಮ ದುಡಿಮೆಯನ್ನೆ ಕೂಡಿಟ್ಟು ಸ್ವಾಭಿಮಾನನ್ನ ತೋರಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *