ಲಕ್ನೋ: ಕೊರೊನಾ ವೈರಸ್ ಅನ್ನು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೆ ಮನೆಕಟ್ಟಿ ವಾಸಮಾಡುತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಸೋಧಾ ಗ್ರಾಮದ ಮುಕುಲ್ ತ್ಯಾಗಿ ಟ್ರೀಹೌಸ್ ನಿರ್ಮಾಣ ಮಾಡಿದ್ದಾರೆ. ಹಳೆಯ ಮತ್ತು ಒಣಗಿದ ಮರಗಳಿಂದ ಸರಳವಾದ ಮನೆ ನಿರ್ಮಿಸಿದ್ದಾರೆ.
“ದೇಶದಲ್ಲಿ ಕೊರೊನಾ ವೈರಸ್ ಹರಡಿದಾಗಿನಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮಾತ್ರ ತಡೆಗಟ್ಟಲು ಸಾಧ್ಯ ಎಂದು ಹೇಳಿದ್ದಾರೆ. ಹೀಗಾಗಿ ಸಾಮಾಜಿಕ ಅಂತರದ ನಿಯಮವನ್ನು ಗಮನದಲ್ಲಿಟ್ಟುಕೊಂಡು ನಾನು ಒಬ್ಬನೇ ಬದುಕಲು ನಿರ್ಧರಿಸಿದೆ. ನನ್ನ ಮಗನ ಸಹಾಯದಿಂದ ನಾವು ಮರಗಳನ್ನು ತಂದು ಅವುಗಳನ್ನು ಕತ್ತರಿಸಿ ಹಲಗೆಗಳನ್ನು ಒಟ್ಟಿಗೆ ಸೇರಿಸಿ ಕಟ್ಟಿದ್ದೇವೆ” ಎಂದು ತ್ಯಾಗಿ ಹೇಳಿದ್ದಾರೆ.
ನನ್ನ ತಂದೆ ಟ್ರೀಹೌಸ್ ನಿರ್ಮಿಸುವ ಬಗ್ಗೆ ನನಗೆ ಹೇಳಿದರು. ಇದಕ್ಕಾಗಿ ನಾವು ಒಣಗಿದ ಮರಗಳನ್ನು ಬಳಸಿದ್ದೇವೆ. ಅವುಗಳನ್ನು ಕತ್ತರಿಸಿ ಹಲಗೆ ರೀತಿಯಲ್ಲಿ ಮಾಡಿದ್ದೇವೆ. ನಂತರ ನಾವು ಆ ಹಲಗೆಗಳನ್ನು ಒಟ್ಟಿಗೆ ಕಟ್ಟಿದ್ದೇವೆ ಎಂದು ತ್ಯಾಗಿ ಮಗ ತಿಳಿಸಿದನು.
Hapur man builds 'treehouse' to maintain social distancing as COVID-19 spreads
Read @ANI story | https://t.co/c2WeYzOeUa pic.twitter.com/RBTIuAIRnS
— ANI Digital (@ani_digital) April 10, 2020
ಇಲ್ಲಿ ವಾಸಿಸುವುದರಿಂದ ನಾನು ಪ್ರಕೃತಿಗೆ ಹತ್ತಿರವಾಗಿದ್ದೇನೆ ಮತ್ತು ಪರಿಸರವೂ ಇಲ್ಲಿ ತುಂಬಾ ಸ್ವಚ್ಛವಾಗಿದೆ. ನನಗೆ ಕಾಡಿನಲ್ಲಿ ವಾಸಿಸುವ ಅನುಭವವಾಗುತ್ತಿದೆ. ನಿಜಕ್ಕೂ ಇಲ್ಲಿಯ ವಾಸ ಚೆನ್ನಾಗಿದೆ ಎಂದು ತ್ಯಾಗಿ ಸಂತಸದಿಂದ ಹೇಳಿದ್ದಾರೆ. ತ್ಯಾಗಿಗೆ ಆಹಾರ ಅವರ ಮನೆಯಿಂದಲೇ ಬರುತ್ತದೆ.