ಕೋಲಾರ: ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದು ಹತ್ಯೆಗೈದ ಘಟನೆ ಕೋಲಾರದ ನೂರ್ ನಗರದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
Advertisement
ಕೊಲೆಯಾದ ವ್ಯಕ್ತಿಯನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಆತ ತನ್ನ ಪ್ರೇಯಸಿ ಮನೆಗೆ ಹೋಗಿ ಬರುವಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದಿದ್ದಾರೆ. ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
Advertisement
Advertisement
ಉಸ್ಮಾನ್ ಕಳೆದೆ ಐದು ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್‍ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು ಎಂದು ತಿಳಿದು ಬಂದಿದೆ.
Advertisement
ಕೊಲೆಯಾದ ಉಸ್ಮಾನ್ ಕಳೆದ ರಾತ್ರಿ ತನ್ನ ಪ್ರೇಯಸಿಯ ಮನೆಗೆ ತೆರಳಿದ್ದ. ಅಲ್ಲದೇ ಆಕೆಯನ್ನು ಮದುವೆ ಮಾಡಿಕೊಡುವಂತೆ ಹೇಳಿದ್ದ. ಇದರಿಂದ ಆತ ವಾಪಸ್ ತೆರಳುತ್ತಿದ್ದಾಗ ಯುವತಿಯ ಕುಟುಂಬಸ್ಥರು ಹಾಗೂ ಸ್ಥಳೀಯರು, ಉಸ್ಮಾನ್‍ನನ್ನು ಏರಿಯಾದಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದರು.
ಈ ಸಂಬಂಧ ಗಲ್‌ಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರನ್ನು ಅಫ್ರೀದ್, ಜಮೀರ್, ನಜೀರ್ ಮತ್ತು ಸಲ್ಮಾನ್ ಪಾಷಾ ಎಂದು ಗುರುತಿಸಲಾಗಿದೆ.