ಕಲಬುರಗಿ: ಬೈಕ್ ಅಡ್ಡಗಟ್ಟಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಖಾದ್ರಿ ಚೌಕ (Khadri Chowk) ಬಳಿ ನಡೆದಿದೆ.
ಖಾದ್ರಿ ಚೌಕ ವ್ಯಾಪ್ತಿಯ ನಬಿ ಕಾಲೋನಿ ನಿವಾಸಿ ಇಮ್ರಾನ್ ಸೈಯದ್(28) ಹತ್ಯೆಯಾದ ವ್ಯಕ್ತಿ. ಮಾ. 12ರಂದು ರಾತ್ರಿ 10 ಗಂಟೆ ಸುಮಾರಿಗೆ ಇಮ್ರಾನ್ ಬೈಕ್‌ನಲ್ಲಿ ತೆರಳುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಇಮ್ರಾನ್ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!
ಹತ್ಯೆಯಾಗಿರುವ ಇಮ್ರಾನ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆ ಎಲ್ಲಾ ಪ್ರಕರಣಗಳ ವಿಚಾರಣೆ ಸಹ ನಡೆದಿತ್ತು. ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಮಾನಿಟರ್‌ಗೆ ಪ್ರತಿ ಠಾಣೆಯಲ್ಲಿ ವಿಶೇಷ ವಿಭಾಗ ಸ್ಥಾಪನೆ: ಪರಮೇಶ್ವರ್
ಘಟನಾ ಸ್ಥಳಕ್ಕೆ ಡಿಸಿಪಿ ಕನಿಕಾ ಸಿಕ್ರಿವಾಲ್ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.