– ಲಾಕ್‍ಡೌನ್ ನಡ್ವೆಯೇ ಆಸ್ಪತ್ರೆಗೆ ತೆರಳಿ ರಕ್ತದಾನ
ರಾಂಚಿ: ಸದ್ಯ ಭಾರತ ದೇಶ ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಎದುರಿಸುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ಮಾನವೀಯ ಕಾರ್ಯಗಳು ನಡೆಯುತ್ತಿದ್ದು, ನಮ್ಮ ಕಣ್ಣ ಮುಂದಿವೆ. ಹಾಗೆಯೇ ಜಾತಿ-ಧರ್ಮ ನಂತರ ಮಾನವೀಯತೆ ಮೊದಲು ಎಂಬಂತೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಮಗುವಿನ ಪ್ರಾಣ ರಕ್ಷಣೆಗೆ ನಿಂತಿದ್ದು, ಇದೀಗ ಮಾದಿರಿಯಾಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
8 ವರ್ಷದ ನಿಖಿಲ್ ಎಂಬ ಬಾಲಕ ನ್ಯುಮೋನಿಯಾದಿಂದ ಬಳಲುತ್ತಿದ್ದು, ರಕ್ತಕ್ಕಾಗಿ ಪೋಷಕರು ಪರದಾಡುತ್ತಿದ್ದರು. ಇವರ ಪರದಾಟವನ್ನು ಗಮನಿಸಿದ ಸಲೀಂ ಅನ್ಸಾರ್ ಸಹಾಯ ಮಾಡುವ ಮೂಲಕ ನಿಖಿಲ್ ಗೆ ದೇವರಾಗಿ ಬಂದಿದ್ದಾರೆ.
Advertisement
Advertisement
ಅನ್ಸಾರ್ ಅವರು ನಿಖಿಲ್ ರಕ್ಷಣೆಗಾಗಿ ನಿಂತಿದ್ದು, ಬಾಲಕನಿಗೆ ರಕ್ತದಾನ ಮಾಡಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ 1 ತಿಂಗಳ ಕಾಲ ಅನ್ಸಾರಿ ಅವರು ಉಪವಾಸ ಕೈಗೊಂಡಿದ್ದರು. ಆದರೆ ಇದೀಗ ಬಾಲಕನ ರಕ್ಷಣೆಗಾಗಿ ಉಪವಾಸವನ್ನೇ ಕೈಬಿಟ್ಟಿದ್ದಾರೆ.
Advertisement
ಜಾರ್ಖಂಡ್ ಜಿಲ್ಲೆಯ ಹಜರಿಬಾಘ್ ನಲ್ಲಿರುವ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಈತನ ಸ್ಥಿತಿ ಚಿಂತಾಜನಕವಾಗಿದ್ದು, ಎ ಪಾಸಿಟಿವ್ ರಕ್ತದ ಅವಶ್ಯತೆ ಇದೆ.
Advertisement
ಆದರೆ ಸುತ್ತಮುತ್ತ ಸದ್ಯ ಯಾರೂ ರಕ್ತ ಕೊಡಲು ಮುಂದೆ ಬರದಿದ್ದರಿಂದ ನಿಖಿಲ್ ಪೋಷಕರು ಚಿಂತಾಕ್ರಾಂತರಾಗಿದ್ದರು. ಇದರಿಂದ ನೊಂದ ಪೋಷಕರು ಗ್ರಾಮದ ಜನರಿಗೆ ರಕ್ತದಾನದ ಅವಶ್ಯಕತೆ ಇರೋ ಬಗ್ಗೆ ಒಂದು ಸಂದೇಶವನ್ನು ಕಳುಹಿಸಿದ್ದಾರೆ. ಈ ವೇಳೆ ಗಿರಿಧ್ ಜಿಲ್ಲೆಯ ಬಗೋದರ್ ಬ್ಲಾಕ್ ನಿವಾಸಿ ಅನ್ಸಾರ್ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ.
ದುರಂತ ಅಂದರೆ ಕೊರೊನಾ ವೈರಸ್ ಹರಡುವ ಭೀತಿಯಿಂದ ಲಾಕ್ ಡೌನ್ ಮಾಡಲಾಗಿದ್ದರ ಪರಿಣಾಮ ಅನ್ಸಾರ್ ಅವರಿಗೆ ರಕ್ತದಾನ ಮಾಡಲು ಹೊರಬರಲು ಸಾಧ್ಯವಾಗಲಿಲ್ಲ. ಕೊನೆಗೆ ವೈದ್ಯರ ಸಹಕಾರದಿಂದ ಹೇಗೋ ಹೊರ ಬಂದರೂ, ಪೊಲೀಸರು ಬಿಡದೆ ಕಾಡಿ-ಬೇಡಿ ಕೊನೆಗೂ ಆಸ್ಪತ್ರೆ ತಲುಪಿದರು.
ಹೀಗೆ ಆಸ್ಪತ್ರೆ ತಲುಪಿದ ಅನ್ಸಾರ್ ಅವರಿಗೆ ಡಾಕ್ಟರ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ನೀವು ರಕ್ತದಾನ ಮಾಡಲು ತಯಾರಿದ್ದರೆ ನಿಮ್ಮ ಉಪವಾಸವನ್ನು ಕೈಬಿಡಬೇಕು ಎಂದು ಹೇಳಿದ್ದಾರೆ. ಯಾಕಂದರೆ ರಕ್ತದಾನ ಮಾಡಿದ ಬಳಿಕ ಏನಾದರೂ ಸ್ಪಲ್ಪ ತಿನ್ನಲೇಬೇಕಾಗುತ್ತದೆ. ಉಪವಾಸ ಇದ್ದರೆ ಇದು ಕಷ್ಟ ಸಾಧ್ಯ ಎಂದು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಅನ್ಸಾರ್ ಅವರು ಉಪವಾಸ ಕೈಬಿಟ್ಟು ಬಾಲಕನಿನಾಗಿ ಮಾನವೀಯತೆ ಮೆರೆದಿದ್ದಾರೆ.
ನಾನು ಕುಸಮ್ರಝಾ ಗ್ರೂಪ್ ನ ಉಪಾಧ್ಯಕ್ಷನಾಗಿದ್ದು, ಯಾರಿಗೆ ರಕ್ತದ ಅವಶ್ಯಕತೆ ಇದೆಯೋ ಅವರಿಗೆ ದಾನ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಅನ್ಸಾರ್ ತಿಳಿಸಿದ್ದಾರೆ.