ಲಕ್ನೋ: ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ ಅವರ ಬಳಿ ಓಡಿ ಬಂದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ಇಂದು ನಡೆದಿದ್ದು, ವ್ಯಕ್ತಿ ಓಡಿ ಬಂದಿದ್ದರಿಂದ ಪ್ರಿಯಾಂಕ ಗಾಂಧಿ ಅರೆಕ್ಷಣ ಹೌಹಾರಿದರು.
ಪ್ರಿಯಾಂಕ ಗಾಂಧಿ ಅವರು ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಹಾಗೂ ಪಕ್ಷದ ಇತರ ನಾಯಕರೊಂದಿಗೆ ವೇದಿಕೆ ಮೇಲೆ ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಗಿ ಭದ್ರತೆಯ ನಡುವೆಯೂ ನಿಯಮ ಉಲ್ಲಂಘಿಸಿ ನೀಲಿ ಪೇಟ ಧರಿಸಿದ್ದ ಸುಮಾರು 47 ವರ್ಷದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಪ್ರಿಯಾಂಕ ಗಾಂಧಿ ಅವರ ಕಡೆಗೆ ಓಡಿ ಬಂದಿದ್ದಾನೆ. ಇದರಿಂದಾಗಿ ವೇದಿಕೆ ಮೇಲಿದ್ದ ಮುಖಂಡರು ಗಾಬರಿಗೊಂಡರು. ತಕ್ಷಣವೇ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದು, ವೇದಿಕೆಯಿಂದ ಎಳೆದೊಯ್ಯಲು ಪ್ರಯತ್ನಿಸಿದರು.
Advertisement
Advertisement
ಪ್ರಿಯಾಂಕ ಗಾಂಧಿ ಭದ್ರತಾ ಸಿಬ್ಬಂದಿಯನ್ನು ತಡೆದು ತಾಳ್ಮೆಯಿಂದ ತಮ್ಮನ್ನು ಭೇಟಿಯಾಗಲು ಬಂದ ವ್ಯಕ್ತಿಯನ್ನು ಮಾತನಾಡಿಸಿದರು. ಬಳಿಕ ಆತನ ಕೈ ಕುಲುಕಿ, ಕಳುಹಿಸಿಕೊಟ್ಟರು. ಪ್ರಿಯಾಂಕ ಗಾಂಧಿ ಅವರೊಂದಿಗೆ ಮಾತನಾಡಿದ ವ್ಯಕ್ತಿ ವೇದಿಕೆಯಿಂದ ಕೆಳಗೆ ಇಳಿದು ಬರುವಾಗ ವೇದಿಕೆ ಮೇಲಿದ್ದ ಕೆಲ ನಾಯಕರಿಗೆ ಅಭಿನಂದನೆ ಸಲ್ಲಿಸಿದ. ಬಳಿಕ ಕಾಂಗ್ರೆಸ್ ಹಾಗೂ ಪ್ರಿಯಾಂಕ ಗಾಂಧಿ ಪರ ಘೋಷಣೆ ಕೂಗುತ್ತಲೇ ವೇದಿಕೆಯಿಂದ ಕೆಳಗೆ ಇಳಿದ.
Advertisement
ಕಾಂಗ್ರೆಸ್ ತನ್ನ 135ನೇ ಸಂಸ್ಥಾಪನಾ ದಿನವಾದ ಇಂದು ದೇಶಾದ್ಯಂತ ಮೆರವಣಿಗೆಗಳನ್ನು ಕೈಗೊಂಡಿದೆ. ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಧ್ವಜಾರೋಹಣ ನೆರವೇರಿಸಿದ್ದಾರೆ.
Advertisement
#WATCH Man breaches security of Priyanka Gandhi Vadra at a party event in Lucknow on Congress foundation day, gets to meet her. pic.twitter.com/v4UtwedMF2
— ANI UP/Uttarakhand (@ANINewsUP) December 28, 2019