ಕಾರವಾರ: ಕೋಣಿ ಬೀಚ್ ನಲ್ಲಿ ನಿಲ್ಲಿಸಿದ್ದ ದೋಣಿಯನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಲ್ಲಿ ಕದ್ದು, ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿ ಪರದಾಡಿರುವ ಘಟನೆ ನಡೆದಿದೆ.
ಲೈಟ್ ಹೌಸ್ ನೋಡಲು ಹೋದ ಮಹಾರಾಷ್ಟ್ರ ಮೂಲದ ಸಪ್ನಲ್ (21) ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿಕೊಂಡಿದ್ದ. ಬಳಿಕ ಕರಾವಳಿ ಕಾವಲುಪಡೆ ಸಿಬ್ಬಂದಿ ರಕ್ಷಣೆ ಮಾಡಿ, ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಅರಗ ಜ್ಞಾನೇಂದ್ರಗೆ ಅಲ್ಪನಿಗೆ ಐಶ್ವರ್ಯ ಸಿಕ್ಕ ಹಾಗೇ ಆಗಿದೆ: ಬಿ.ಕೆ ಸಂಗಮೇಶ್
Advertisement
Advertisement
ಇಂದು ಕಾರವಾರದ ಕೋಣಿ ಬೀಚ್ ಗೆ ಬಂದಿದ್ದ ಈತನಿಗೆ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿರುವ ಲೈಟ್ ಹೌಸ್ ನೋಡುವ ಹಂಬಲವಾಗಿದೆ. ಬೀಚ್ ನಲ್ಲಿ ನಿಲ್ಲಿಸಿದ್ದ ಓಂ ಯತಾಳ ಎಂಬ ನಾಡದೋಣಿಯನ್ನು ಕುಡಿದ ಮತ್ತಲ್ಲಿ ಕದ್ದು, ಸಮುದ್ರದಲ್ಲಿ ಹೋಗಿ ಲೈಟ್ ಹೌಸ್ ತಲುಪಿದ್ದಾನೆ. ಈ ವೇಳೆ ದೋಣಿಯ ಲಂಗುರನ್ನು ಸರಿಯಾಗಿ ಹಾಕದ್ದರಿಂದ ಲೈಟ್ ಹೌಸ್ ಬಳಿಯ ದ್ವೀಪದಲ್ಲಿರುವ ಬಂಡೆಯ ಬಳಿ ಸಿಲುಕಿಕೊಂಡಿದೆ.
Advertisement
Advertisement
ಈ ಕುರಿತು ಮಾಹಿತಿ ಪಡೆದ ಕರಾವಳಿ ಕಾವಲುಪಡೆ ಸಿಪಿಐ ನಿಶ್ಚಲ್ ಕುಮಾರ್, ಇಂಟರ್‍ಸೆಪ್ಟರ್ ಬೋಟ್ ಮೂಲಕ ಸ್ಥಳಕ್ಕೆ ತೆರಳಿ, ಈತನನ್ನು ರಕ್ಷಿಸಿ ಕರೆತಂದಿದ್ದಾರೆ. ಬಳಿಕ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.