ಭೋಪಾಲ್: ಶೌಚಾಲಯ (Toilet) ಬಳಸಲೆಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು (Vande Bharat Express Train) ಹತ್ತಿದ ವ್ಯಕ್ತಿ 6,000 ರೂ. ಕಳೆದುಕೊಂಡಿರುವ ಪ್ರಸಂಗವೊಂದು ವರದಿಯಾಗಿದೆ.
ಹೈದರಾಬಾದ್ ಮೂಲದ ಅಬ್ದುಲ್ ಖಾದಿರ್ ತನ್ನ ಕುಟುಂಬದೊಂದಿಗೆ ಭೋಪಾಲ್ (Bhopal) ರೈಲ್ವೆ ಪ್ಲಾಟ್‌ಫಾರ್ಮ್ನಲ್ಲಿದ್ದಾಗ ಆತನಿಗೆ ಮೂತ್ರ ವಿಸರ್ಜನೆಗಾಗಿ ತುರ್ತಾಗಿ ಶೌಚಾಲಯ ಬಳಸುವ ಅನಿವಾರ್ಯತೆ ಎದುರಾಯಿತು. ಈ ವೇಳೆ ಆತ ನಿಲ್ದಾಣದಲ್ಲಿ ನಿಂತಿದ್ದ ವಂದೇ ಭಾರತ್ ರೈಲನ್ನು ಹತ್ತಿ ಅಲ್ಲಿನ ಶೌಚಾಲಯ ಬಳಸಿದ್ದಾನೆ. ಆದರೆ ಆತ ಶೌಚಾಲಯದಿಂದ ಹೊರಬರುವಷ್ಟರಲ್ಲಿ ರೈಲಿನ ಬಾಗಿಲುಗಳು ಮುಚ್ಚಿ, ಚಲಿಸಲು ಪ್ರಾರಂಭವಾಗಿತ್ತು.
ಖಾದಿರ್ ತನ್ನ ಪತ್ನಿ ಹಾಗೂ 8 ವರ್ಷದ ಮಗನೊಂದಿಗೆ ಭೋಪಾಲ್‌ನಿಂದ ಸಿಂಗ್ರೌಲಿಗೆ ಹೋಗಬೇಕಿತ್ತು. ಆದರೆ ಆತ ಪತ್ನಿ ಹಾಗೂ ಮಗನನ್ನು ನಿಲ್ದಾಣದಲ್ಲೇ ಬಿಟ್ಟು ತಾನು ಮಾತ್ರ ಇಂದೋರ್‌ಗೆ ಹೋಗುವ ರೈಲನ್ನು ಹತ್ತಿ ಶೌಚಾಲಯ ಬಳಸಿದ್ದ. ತಕ್ಷಣ ಆತ ರೈಲಿನಿಂದ ಇಳಿಯುವ ಸಲುವಾಗಿ ವಿವಿಧ ಕೋಚ್‌ಗಳಿಗೆ ತೆರಳಿ ಮೂವರು ಕಲೆಕ್ಟರ್‌ಗಳನ್ನು ವಿಚಾರಿಸಿದ್ದಾನೆ. ಆದರೆ ರೈಲಿನ ಬಾಗಿಲನ್ನು ಚಾಲಕ ಮಾತ್ರವೇ ತೆರೆಯಲು ಸಾಧ್ಯ ಎಂದಿದ್ದಾರೆ. ಅದರಂತೆ ಖಾದಿರ್ ಚಾಲಕನೆಡೆಗೆ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಆತನನ್ನು ಅಧಿಕಾರಿಗಳು ತಡೆದಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರರು ಬೆಂಗ್ಳೂರಲ್ಲೇ ಅಡಗಿಸಿಟ್ಟಿದ್ದ ಗ್ರೆನೇಡ್‌ಗಳು ಪತ್ತೆ
ಟಿಕೆಟ್ ರಹಿತವಾಗಿ ರೈಲು ಹತ್ತಿದ್ದಕ್ಕಾಗಿ ಆತ 1,020 ರೂ. ದಂಡವನ್ನು ಪಾವತಿಸಬೇಕಾಯಿತು. ಉಜ್ಜಯಿನಿಯಲ್ಲಿ ರೈಲು ನಿಂತ ಬಳಿಕ ಆತ ರೈಲಿನಿಂದ ಕೆಳಗಿಳಿದು ಭೋಪಾಲ್‌ಗೆ ವಾಪಸ್ ತೆರಳಲು ಬಸ್ ಟಿಕೆಟ್‌ಗಾಗಿ ಮತ್ತೆ 750 ರೂ. ಖರ್ಚು ಮಾಡಬೇಕಾಯಿತು.
ಇತ್ತ ಖಾದಿರ್ ಪತ್ನಿ ಹಾಗೂ ಮಗ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಚಿಂತಿತರಾಗಿ ಸಿಂಗ್ರೌಲಿ ತೆರಳುವ ರೈಲನ್ನು ಹತ್ತದೇ ಅದಕ್ಕಾಗಿ ಖರ್ಚು ಮಾಡಿದ್ದ 4,000 ರೂ. ಟಿಕೆಟ್ ಅನ್ನು ವ್ಯರ್ಥ ಮಾಡಿದ್ದಾರೆ. ಖಾದಿರ್ ಶೌಚಾಲಯ ಬಳಸಲೆಂದು ವಂದೇ ಭಾರತ್ ರೈಲು ಹತ್ತಿ ಮಾಡಿಕೊಂಡ ಯಡವಟ್ಟು 6,000 ರೂ. ಕಳೆದುಕೊಳ್ಳಲು ಕಾರಣವಾಯಿತು. ಇದನ್ನೂ ಓದಿ: ಮಹಾರಾಷ್ಟ್ರದ ರಾಯಗಢದಲ್ಲಿ ಭಾರೀ ಮಳೆಗೆ ಭೂಕುಸಿತ – 10 ಮಂದಿ ಸಾವು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]