ಚಿಕ್ಕಬಳ್ಳಾಪುರ: ವಿವಾಹಿತೆಯ ಹಿಂದೆ ಬಿದ್ದ ಮತ್ತೊಬ್ಬ ವಿವಾಹಿತ, ತನ್ನನ್ನು ಪ್ರೀತಿಸುವಂತೆ ವಿವಾಹಿತೆಗೆ ದುಂಬಾಲು ಬಿದ್ದಿದ್ದ. ಇದರಿಂದ ಮನನೊಂದ ಗೃಹಿಣಿ ಚಿಕ್ಕಬಳ್ಳಾಪುರ ಜಿಲ್ಲೆಯ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವಕನೊಬ್ಬ ವಿವಾಹಿತೆಯನ್ನು ಪ್ರೀತಿಸುತ್ತಿರುವುದನ್ನು ಅರಿತ ಆಕೆಯ ಮನೆಯವರು, ಆತನಿಗೆ ಬುದ್ಧಿ ಹೇಳಿದ್ರು. ಇದರಿಂದಲೂ ಸುಮ್ಮನಾಗದ ಆತ ವಿವಾಹಿತೆಗೆ ಬ್ಲಾಕ್ ಮೇಲ್ ಮಾಡಲು ಆಕೆಯ ಫೋಟೋ ಜೊತೆ ತನ್ನ ಫೋಟೋ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಇದ್ರಿಂದ ಮಹಿಳೆ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಯದಲ್ಲಿ ನಡೆದಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿ ರಕ್ಷಣೆಗೆ ಶಿಕ್ಷಣ ಇಲಾಖೆಯಿಂದ ವಿಶೇಷ ಅಭಿಯಾನ
Advertisement
Advertisement
ನಡೆದಿದ್ದೇನು?
ಆಲ್ಫೀಯಾ ತಾಜ್ ಮೃತ ವಿವಾಹಿತೆ. ಈಕೆಗೆ ಇನ್ನೂ ಹದಿನೇಳು ವರ್ಷ ವಯಸ್ಸು. ಅಲ್ಪೀಯಾ ತಾಜ್‍ಗೆ ಹೈಸ್ಕೂಲ್‍ನಲ್ಲಿ ಓದುತ್ತಿದ್ದಾಗಲೇ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿ ಕೈ ತೊಳೆದುಕೊಂಡಿದ್ರು. ಆದ್ರೆ ಗಂಡನ ಮನೆಯಲ್ಲಿ ಇರಲಾಗದ ಆಲ್ಫೀಯಾ ತಾಜ್ ವಾಪಸ್ ಆಗಮಿಸಿ ತವರು ಮನೆಯಲ್ಲಿ ಇದ್ದಳು.
Advertisement
Advertisement
ಚೌಡರೆಡ್ಡಿ ಪಾಳ್ಯಾ ನಿವಾಸಿ ಹಾಗೂ ಪರಿಚಯಸ್ಥ ಯುವಕ ಸಯ್ಯದ್ ನಾಸೀರ್ ಆಲ್ಫೀಯಾ ಮೇಲೆ ಕಣ್ಣು ಹಾಕಿದ್ದ. ಆಲ್ಫೀಯಾಳನ್ನು ಪ್ರೀತಿಸುವುದಾಗಿ ಹೇಳಿ ಆಕೆಯ ಹಿಂದೆ ಬಿದ್ದಿದ್ದ. ಇದ್ರಿಂದ ಆಲ್ಫೀಯಾ ಸಹೋದರರು ಸಯ್ಯದ್ ನಾಸೀರ್‌ಗೆ ಬೈಯ್ದು ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ರು. ಆದ್ರು ಸುಮ್ಮನಾಗದ ನಾಸೀರ್, ಆಲ್ಫೀಯಾಳ ಫೋಟೋ ಜೊತೆ ತನ್ನ ಫೋಟೋ ಜೋಡಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದ್ರಿಂದ ನೊಂದು ಆಲ್ಫೀಯಾ ತಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆ ಸಹೋದರ ಆರೋಪಿಸಿದ್ದಾನೆ.
ನಾಸೀರ್‍ನ ಕಿರುಕುಳ, ಬ್ಲಾಕ್ ಮೇಲ್ ಹಾಗೂ ಫೋಟೋ ಪೋಸ್ಟ್‌ನಿಂದಲೇ ಆಲ್ಫೀಯಾ ತಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕ್ರೋಶಗೊಂಡ ಆಲ್ಫೀಯಾ ತಾಜ್ ಸಹೋದರರು ಹಾಗೂ ಸಂಬಂಧಿಗಳು, ನಾಸೀರ್ ಮನೆಗೆ ನುಗ್ಗಿದ್ದಾರೆ. ಈ ವೇಳೆ ನಾಸೀರ್‌ಗೆ ಥಳಿಸಿ ದಾಂಧಲೆ ಮಾಡಿದ್ದಾರೆ. ಆಗ ನಾಸೀರ್ ಮತ್ತು ಕುಟುಂಬ ಮನೆಗೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಒಕ್ಕೂಟದ ಪತನದ ನಂತರ ರಾಜೀನಾಮೆ ನೀಡಲು ಮುಂದಾದ ಇಟಲಿ ಪಿಎಂ
ಆಲ್ಫೀಯಾಳ ನೋವಿನ ಹಿಂದೆ ಆಕೆಯ ಬಾಲ್ಯ ವಿವಾಹದ ಮತ್ತೊಂದು ಸ್ಟೋರಿ ತೆರೆದುಕೊಳ್ಳುತ್ತೆ. ಆಲ್ಫೀಯಾಗೆ ಬಂದ ಗತಿ ರಾಜ್ಯದಲ್ಲಿ ಯಾವುದೇ ಹೆಣ್ಣು ಮಗಳಿಗೂ ಆಗಬಾರದು ಅಂತ ಸಂಬಂಧಿಗಳು ಒತ್ತಾಯ ಮಾಡಿದ್ದಾರೆ.
ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.