ಮುಂಬೈ: ಯುವಕನೊಬ್ಬ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ಗೆಳೆಯನ ಕುತ್ತಿಗೆಗೆ ಕಚ್ಚಿದ್ದು, ಬಳಿಕ ಆತನೇ ಹೆಣವಾಗಿ ಹೋದ ಪ್ರಸಂಗವೊಂದು ಮುಹಾರಾಷ್ಟ್ರದಲ್ಲಿ (Maharastra) ನಡೆದಿದೆ.
ಮೃತನನ್ನು ಇಶ್ತಿಯಾಕ್ ಖಾನ್ ಎಂದು ಗುರುತಿಸಲಾಗಿದೆ. ಈತನ ತಲೆಗೆ ಕಲ್ಲಿನಿಂದ ಜಜ್ಜಿ ರಾಹುಲ್ ಲೋಹರ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಯುವತಿಯ ಸ್ನಾನದ ವೀಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಯುವಕ!
ನಡೆದಿದ್ದೇನು..?: ರಾಹುಲ್ ತನ್ನ ಗೆಳೆಯರ ಜೊತೆ ಮದ್ಯಪಾನ (Alcohol) ಮಾಡಲು ತೆರಳಿದ್ದಾನೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಶ್ತಿಯಾಕ್, ನನಗೆ ನಿನ್ನ ರಕ್ತ ಕುಡಿಯಬೇಕು (Blood) ಎಂದು ಹೇಳಿದ್ದಾನೆ. ಅಲ್ಲದೇ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ರಾಹುಲ್ ಕುತ್ತಿಗೆಗೆ ಕಚ್ಚಿದ್ದಾನೆ.
ಈ ಸಂಬಂಧ ಅಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ರಾಹುಲ್ ಅಲ್ಲಿಂದ ತೆರಳಿದ್ದಾನೆ. ಕೆಲ ಗಂಟೆಗಳ ಬಳಿಕ ರಾಹುಲ್ ಮತ್ತೆ ಗೆಳೆಯ ಇಶ್ತಿಯಾಕ್ ಭೇಟಿಯಾಗಲು ಬಂದಿದ್ದಾನೆ. ಈ ವೇಳೆ ನಿನಗೆ ನನ್ನ ರಕ್ತ ಬೇಕಾ..? ನಿನ್ನ ಜೀವಂತವಾಗಿರಲು ನಾನು ಬಿಡಲ್ಲ ಎಂದು ಹೇಳಿ ಇಶ್ತಿಯಾಕ್ ತಲೆಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಆರೋಪಿ ರಾಹುಲ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಂದ್ರ ನಿಕಲ್ಜೆ ತಿಳಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]