LatestMain PostNational

ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ ನಂತರ ಆಕೆಯ ತಲೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಹೈದರಾಬಾದ್‍ನ ರಾಜೇಂದ್ರನಗರದ ಎಂಎಂ ಪಹಾಡಿಯಲ್ಲಿ ನಡೆದಿದೆ.

ಸಮ್ರೀನ್ ಮೃತದುರ್ದೈವಿಯಾಗಿದ್ದು, ಆರೋಪಿ ಪರ್ವೇಜ್ ಎಂದು ಗುರುತಿಸಲಾಗಿದೆ. ಆರೋಪಿ ಆಗಾಗಾ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಅಲ್ಲದೇ ದಂಪತಿ ಜಗಳದಿಂದಾಗಿ ವಿಚ್ಛೇದನವನ್ನು ಸಹ ಪಡೆದುಕೊಂಡಿದ್ದರು. ಆದರೆ ಒಂದು ವರ್ಷದ ಹಿಂದೆ ಪರ್ವೇಜ್ ತನ್ನ ಬಳಿಗೆ ಮರಳಲು ಸಮ್ರೀನ್‍ಗೆ ವಿನಂತಿಸಿದ್ದನು. ಹೀಗಾಗಿ ಮತ್ತೆ ಒಂದಾಗಿ ದಂಪತಿ ಒಟ್ಟಿಗೆ ಇದ್ದರು. ಇದನ್ನೂ ಓದಿ: ನಾನು ಜೆಡಿಎಸ್‍ನಲ್ಲಿ ಇರಬೇಕಾ? ಬೇಡ್ವಾ?: ಜಿ.ಟಿ.ದೇವೆಗೌಡ

ಗುರುವಾರ ಮಧ್ಯರಾತ್ರಿ ಪರ್ವೇಜ್ ಇದೇ ವಿಚಾರವಾಗಿ ಜಗಳ ತೆಗೆದು ಹರಿತವಾದ ಆಯುಧದಿಂದ ಸಮ್ರೀನ್ ಕತ್ತು ಸೀಳಿ ಹತ್ಯೆಗೈದಿದ್ದಾನೆ. ನಂತರ ಮೃತಪಟ್ಟ ಪತ್ನಿಯ ತಲೆಯೊಂದಿಗೆ ರಾಜೇಂದ್ರನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ದೂರು ದಾಖಲಿಸಿಕೊಂಡಿದ್ದು, ಪ್ರಕರಣ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.

Back to top button