CrimeLatestMain PostNational

500 ರೂ.ಗಾಗಿ ಸ್ನೇಹಿತನ ಶಿರಚ್ಛೇದ- ತಲೆಯನ್ನು ಪೊಲೀಸ್ ಠಾಣೆಗೆ ತೆಗೆದೊಯ್ದ

ಗುವಾಹಟಿ: ವ್ಯಕ್ತಿಯೋರ್ವ 500 ರೂ.ಗಾಗಿ ಸ್ನೇಹಿತನ ಶಿರಚ್ಛೇದನ ಮಾಡಿ, ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಸೋನಿತ್‍ಪುರ ಜಿಲ್ಲೆಯ ರಂಗಪಾರದ ದಯಾಲ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತುನಿರಾಮ್ ಮಾದ್ರಿ(40) ಕೋಪದ ಭರದಲ್ಲಿ ತನ್ನ ಸ್ನೇಹಿತ ಬ್ರೈಲರ್ ಹೆಮ್ರೋಮ್‍ನ ತಲೆಯನ್ನು ಮಚ್ಚಿನಿಂದ ಕತ್ತರಿಸಿ ನಂತರ ರಂಗಪಾರ ಪೊಲೀಸ್ ಠಾಣೆಗೆ ತೆರಳಿದ್ದಾನೆ.

crime

ತುನಿರಾಮ್ ಮಾದ್ರಿ ಹಾಗೂ ಬ್ರೈಲರ್ ಹೆಮ್ರೋಮ್ ದಯಾಲ್‍ಪುರ ಗ್ರಾಮದ ನಿವಾಸಿಗಳಾಗಿದ್ದು, ಸ್ನೇಹಿತರಾಗಿದ್ದರು. ಗ್ರಾಮದಲ್ಲಿ ನಡೆಯುತ್ತಿದ್ದ ಫುಟ್‍ಬಾಲ್ ಪಂದ್ಯಾವಳಿಯ ಫೈನಲ್‍ನ್ನು ವೀಕ್ಷಿಸಲು ಹೆಮ್ರಾನ್‍ನು ಮಾದ್ರಿ ಬಳಿ 500 ರೂ. ಸಾಲವನ್ನು ಕೇಳಿದ್ದನು. ಆದರೆ ಆರೋಪಿ ಮಾದ್ರಿ ಹಣವನ್ನು ನೀಡಲು ನಿರಾಕರಿಸಿದ್ದ.

ಈ ಹಿನ್ನೆಲೆಯಲ್ಲಿ ಹೆಮ್ರಾನ್ ಬೆದರಿಕೆಯನ್ನು ಹಾಕಿದ್ದ. ಇದಾದ ಬಳಿಕ ಈ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಇದಾದ ಬಳಿಕ ಊಟಕ್ಕೆ ಮೇಕೆಯನ್ನು ಕಡಿಯುವ ನೆಪದಲ್ಲಿ ಮಾದ್ರಿಯು ಹೆಮ್ರೋಮ್‍ನ ತಲೆ ಕತ್ತರಿಸಿದ್ದಾನೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತನ ಹತ್ಯೆ ಬಳಿಕ ಮತ್ತಷ್ಟು ದಾಳಿಗಳ ಎಚ್ಚರಿಕೆ

ನಂತರ ಮಾದ್ರಿಯು ಹೆಮ್ರೋನ್‍ನ ರುಂಡವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮಾದ್ರಿಯನ್ನು ಬಂಧಿಸಿದ್ದು, ಆತನ ಬಳಿ ಇದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳು ದಿಢೀರ್ ರಾಜೀನಾಮೆ

Live Tv

Leave a Reply

Your email address will not be published.

Back to top button