ರಾಂಚಿ: ಆಸ್ತಿ (Property) ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸೋದರ ಸಂಬಂಧಿಯ (Cousin) ತಲೆಯನ್ನೇ ಕಡಿದು (beheading) ಹತ್ಯೆ ಮಾಡಿದ್ದಲ್ಲದೇ (Murder) ಆತನ ತಲೆಯನ್ನು ಹಿಡಿದುಕೊಂಡು ಸೆಲ್ಫಿಯನ್ನೂ (Selfie) ತೆಗೆದು ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಜಾರ್ಖಂಡ್ನ (Jharkhand) ಖುಂಟಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವ್ಯಕ್ತಿ, ಆತನ ಪತ್ನಿ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
20 ವರ್ಷದ ವ್ಯಕ್ತಿ ಸೋದರ ಸಂಬಂಧಿಯ ತಲೆ ಕಡಿದಿದ್ದಾನೆ. ಬಳಿಕ ಆ ತಲೆಯನ್ನು ಹಿಡಿದುಕೊಂಡು ಆತನ ಸ್ನೇಹಿತರು ಸೆಲ್ಫಿ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಕೊಲೆಯಾದ ವ್ಯಕ್ತಿಯ ತಂದೆ ದೇಸಾಯಿ ಮುಂಡಾ ತನ್ನ ಮಗ ಅಪಹರಣವಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಅವರು ಡಿಸೆಂಬರ್ 1 ರಂದು ಭತ್ತದ ಗದ್ದೆಯಲ್ಲಿ ಕೆಲಸಕ್ಕೆಂದು ಹೋಗಿದ್ದು, ತಮ್ಮ ಮಗ ಮನೆಯಲ್ಲಿ ಒಬ್ಬನೇ ಇದ್ದ. ಮನೆಗೆ ಹಿಂದಿರುಗಿದಾಗ ಮಗನನ್ನು ಅಪಹರಿಸಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಬಳಿಕ ಹುಡುಕಾಡಿದರೂ ಮಗ ಎಲ್ಲಿಯೂ ಸಿಗದ ಹಿನ್ನೆಲೆ ದೇಸಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ವುಹಾನ್ ಲ್ಯಾಬ್ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ
Advertisement
ಎಫ್ಐಆರ್ ದಾಖಲಿಸಿಕೊಂಡ ಖುಂಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿ ಸಾಗರ್ ಮುಂಡಾನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆ ಪ್ರದೇಶದಿಂದ ಸುಮಾರು 15 ಕಿ.ಮೀ ದೂರದ ದುಲ್ವಾ ತುಂಗ್ರಿ ಪ್ರದೇಶದ ಅರಣ್ಯದಲ್ಲಿ ಮೃತ ವ್ಯಕ್ತಿಯ ತಲೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
Advertisement
ಮೃತನ ಕುಟುಂಬ ಹಾಗೂ ಆರೋಪಿಗಳ ನಡುವೆ ಆಸ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದಲೇ ಕಲಹವಿತ್ತು. ಈ ಕಾರಣಕ್ಕೆ ಆರೋಪಿಗಳು ಶಿರಚ್ಛೇದ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಂದ ಪೊಲೀಸರು 6 ಮೊಬೈಲ್ ಫೋನ್ಗಳು, 2 ಹರಿತವಾದ ರಕ್ತಸಿಕ್ತ ಆಯುಧಗಳು, 1 ಕೊಡಲಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ