ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು

Public TV
1 Min Read
Bihar Murder

ಪಾಟ್ನಾ: ಮಾಟಮಂತ್ರದ (Black magic) ಹೆಸರಿನಲ್ಲಿ ವ್ಯಕ್ತಿಯೊಬ್ಬರ ಶಿರಶ್ಛೇದನ ಮಾಡಿ ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟು ಹಾಕಿರುವ ಘಟನೆ ಬಿಹಾರದ (Bihar) ಔರಂಗಾಬಾದ್‌ನಲ್ಲಿ (Aurangabad) ನಡೆದಿದೆ.

ಮೃತ ವ್ಯಕ್ತಿಯನ್ನು ಯುಗುಲ್ ಯಾದಲ್(65) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳಾದ ಮಾಂತ್ರಿಕನ ಸಂಬಂಧಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿ ರಾಮಶಿಶ್ ರಿಕ್ಯಾಸನ್ ಎಂಬ ಮಾಂತ್ರಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಗಿಲ್ಲಿ’ ನಟಿ ರಕುಲ್

ಮಾ.13ರಂದು ಗುಲಾಬ್ ಬಿಘಾ ಗ್ರಾಮದ ನಿವಾಸಿ ಯುಗುಲ್ ಯಾದವ್ ನಾಪತ್ತೆಯಾಗಿದ್ದಾರೆ ಎಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ಅವರನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ತನಿಖೆಯ ಸಮಯದಲ್ಲಿ, ಬಂಗೇರ್ ಗ್ರಾಮದಲ್ಲಿ ಹೋಳಿಕಾ ದಹನ ಬೆಂಕಿಯ ಚಿತಾಭಸ್ಮದಿಂದ ಮಾನವ ಮೂಳೆಗಳು ಪತ್ತೆಯಾಗಿವೆ ಎಂದು ಔರಂಗಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅಂಬರೀಶ್ ರಾಹುಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದಾಗ ಸುಟ್ಟ ಮಾನವ ಮೂಳೆಗಳು ಮತ್ತು ಯುಗುಲ್ ಅವರ ಚಪ್ಪಲಿಗಳು ಕಂಡುಬಂದಿವೆ. ತಕ್ಷಣವೇ ಶ್ವಾನ ದಳವನ್ನು ನಿಯೋಜಿಸಲಾಯಿತು. ಶ್ವಾನವು ತನಿಖಾಧಿಕಾರಿಗಳನ್ನು ಮಾಂತ್ರಿಕ ರಾಮಶಿಶ್ ರಿಕ್ಯಾಸನ್ ಮನೆಗೆ ಕರೆದೊಯ್ಯಿತು. ರಾಮಶಿಶ್ ಮನೆಯಲ್ಲಿ ಇಲ್ಲದಿದ್ದಾಗ, ಈ ಕೃತ್ಯದಲ್ಲಿ ಆತನ ಸಂಬಂಧಿ ಧರ್ಮೇಂದ್ರ ಭಾಗಿಯಾಗಿರುವ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ

ವಿಚಾರಣೆಯ ಸಮಯದಲ್ಲಿ, ಧರ್ಮೇಂದ್ರ ತಾನು ಮತ್ತು ಇತರರು ಮಾಟಮಂತ್ರದ ಭಾಗವಾಗಿ ಯುಗಲ್‌ನನ್ನು ಅಪಹರಿಸಿ ಶಿರಚ್ಛೇದ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಹೋಳಿಕಾ ದಹನ್ ಬೆಂಕಿಯಲ್ಲಿ ಯುಗಲ್ ಮುಂಡವನ್ನು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article