ಹಲವು ವರ್ಷಗಳ ಹಿಂದೆ ವೀರ್ಯ ದಾನ ಮಾಡಿ ಹಣ ಸಂಪಾದಿಸುತ್ತಿದ್ದ ಪತಿಯ ಕುರಿತಾಗಿ ತಿಳಿದು ಬೇಸರಗೊಂಡ ಮಹಿಳೆ, ಆತನಿಂದ ದೂರವಾಗುವ ನಿರ್ಧಾರ ಮಾಡಿರುವ ಘಟನೆಯೊಂದು ಸುದ್ದಿಯಾಗಿದೆ.
ಪತಿ ವೀರ್ಯ ದಾನಿಯಾಗಿದ್ದೇನೆ ಎಂಬ ಸತ್ಯವನ್ನು ಮರೆಮಾಚುವ ನಿರ್ಧಾರ ಆಕೆಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಮನನೊಂದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
Advertisement
Advertisement
ಈ ಕುರಿತಾಗಿ ಮಾತನಾಡಿದ ಆತ, ನಾನು ಕಾಲೇಜಿನಲ್ಲಿದ್ದಾಗ ವೀರ್ಯ ದಾನಿಯಾಗಿದ್ದೆ. ನಾನು ಮುಖ್ಯವಾಗಿ ಹಣ ಗಳಿಸಲು ಇದನ್ನು ಮಾಡಿದ್ದೆ. ಮಕ್ಕಳಿಗಾಗಿ ಕಷ್ಟಪಡುತ್ತಿರುವ ಜನರಿಗೆ ಸಹಾಯ ಮಾಡಬೇಕೆಂದು ವೀರ್ಯ ದಾನ ಮಾಡಲು ಶುರು ಮಾಡಿದೆ. ಕಾಲೇಜು ಮುಗಿದ ಬಳಿಕ ವೀರ್ಯಾಣು ದಾನ ಮಾಡುವುದನ್ನು ಕೂಡ ನಿಲ್ಲಿಸಿದೆ. ಆದರೆ, ಕೆಲವು ವರ್ಷಗಳ ನಂತರ ಮತ್ತೆ ಹಣಕಾಸಿನ ಸಮಸ್ಯೆ ಎದುರಾದಾಗ ಮತ್ತೆ ವೀರ್ಯ ದಾನ ಮಾಡಲು ಆರಂಭಿಸಿದೆ. ಈ ವಿಷಯವನ್ನು ನನ್ನ ಹೆಂಡತಿಯಿಂದ ಮುಚ್ಚಿಟ್ಟಿದ್ದೆ. ನನ್ನ ಗೆಳೆಯರಿಂದ ಆಕೆಗೆ ಈ ವಿಷಯ ತಿಳಿದು ಆಕೆ ಆಘಾತಕ್ಕೊಳಗಾದಳು. ನಾನು ನನ್ನ ಹೆಂಡತಿಗೆ ನಮ್ಮ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾವುದೇ ಮಕ್ಕಳನ್ನು ಹೊಂದಿಲ್ಲ. ಆದರೆ ನನ್ನ ಪತ್ನಿ, ನಾನು ನಂಬಿಕೆ ದ್ರೋಹ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್ ಸುಪ್ರೀಂ ಕೋರ್ಟ್ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್ ಪ್ರಮಾಣ ವಚನ
Advertisement
Advertisement
ನಾನು ಕಾಲೇಜಿನ ಅಂತಿಮ ವರ್ಷದಲ್ಲಿದ್ದಾಗ ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸುವ ಸಲುವಾಗಿ ನಾನು ವೀರ್ಯ ದಾನ ಮಾಡಿದ್ದೆ. ಈ ವಿಷಯವನ್ನು ಯಾರಿಗೂ ಹೇಳಿಲಿಲ್ಲ. ಆರು ವರ್ಷಗಳ ಹಿಂದೆ ಮದುವೆಯಾಗಿ, ಮಕ್ಕಳೊಂದಿಗೆ ಈಗ ಸುಖವಾಗಿದ್ದು, ನಾನು ಮದುವೆಯಾಗುವ ಮೊದಲು ಹಳೆಯ ಸಹಪಾಠಿಗೆ ವೀರ್ಯ ದಾನ ಮಾಡಿದ್ದೆ. ಆ ವಿಷಯ ಈ ಗೊತ್ತಾಗಿದ್ದರಿಂದ ನನ್ನ ಹೆಂಡತಿ ಡೈವೋರ್ಸ್ ನೀಡಿ ದೂರವಾಗಲೂ ಇಚ್ಚಿಸಿದ್ದಾಳೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.