ಚಂಡಿಗಢ್: ಪಂಜಾಬ್‍ನ ಹೋಶಿಯಾಪುರದಲ್ಲಿ ಒಂದು ಫೋನ್ ಕರೆಯಿಂದ ವ್ಯಕ್ತಿಯೊಬ್ಬ ಕೋಟ್ಯಧಿಪತಿ ಆಗಿದ್ದಾರೆ.
ಸನ್‍ಪ್ರೀತ್ ಲಾಟರಿ ಗೆದ್ದು ಕೋಟ್ಯಧಿಪತಿ ಆಗಿದ್ದಾರೆ. ಸನ್‍ಪ್ರೀತ್ ಮೊಬೈಲ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಒಂದು ದಿನ ಅವರಿಗೆ ನೀವು ಲಾಟರಿ ಗೆದಿದ್ದೀರಾ ಎಂದು ಕರೆ ಮಾಡಿದ್ದಾರೆ. ಆದರೆ ಸನ್‍ಪ್ರೀತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.
Advertisement
Advertisement
ತಾನು ಲಾಟರಿ ಗೆದಿದ್ದೇನೆ ಎಂದು ಯಾರೋ ಸುಮ್ಮನೆ ಹೇಳಿ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸನ್‍ಪ್ರೀತ್ ಎಂದುಕೊಂಡಿದ್ದರು. ಅಲ್ಲದೆ ಈ ವಿಷಯವನ್ನು ತನ್ನ ಗೆಳೆಯರ ಬಳಿ ಹೇಳಿದ್ದಾಗ ನಿಜ ಗೊತ್ತಾಗಿದೆ. ಸನ್‍ಪ್ರೀತ್ ಹಾಗೂ ಅವರ ಗೆಳೆಯರು ಈ ಬಗ್ಗೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ್ದಾಗ ಸನ್‍ಪ್ರೀತ್ ಕೆಲವು ದಿನಗಳ ಹಿಂದೆಯೇ ಕೋಟ್ಯಧಿಪತಿ ಆಗಿದ್ದಾರೆ ಎಂದು ತಿಳಿದು ಬಂತು. ಬಳಿಕ ಏಜೆನ್ಸಿ ಅವರನ್ನು ಸಂಪರ್ಕಿಸಿದ್ದಾರೆ.
Advertisement
Advertisement
ಏಜೆನ್ಸಿ ಅವರು ಕೂಡ ಲಾಟರಿ ಹಣ ನೀಡಲು ಸನ್‍ಪ್ರೀತ್‍ನನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಬಳಿಕ ಸನ್‍ಪ್ರೀತಿ ಅವರನ್ನು ಭೇಟಿ ಮಾಡಿ ಗೆದ್ದ 1 ಕೋಟಿ ಲಾಟರಿ ಹಣವನ್ನು ಅವರಿಗೆ ನೀಡಿದ್ದಾರೆ.
ಲಾಟರಿಯಲ್ಲಿ ಒಂದು ಕೋಟಿ ರೂ. ಗೆದಿದ್ದಕ್ಕೆ ಸನ್‍ಪ್ರೀತಿ ಕುಟುಂಬದವರು ಸಂತಸಗೊಂಡಿದ್ದಾರೆ. ಅಲ್ಲದೆ ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದಾರೆ.