Connect with us

ಮಹಿಳಾ ಹೋಂಗಾರ್ಡ್ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಬಿತ್ತು ಗೂಸಾ

ಮಹಿಳಾ ಹೋಂಗಾರ್ಡ್ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಬಿತ್ತು ಗೂಸಾ

ಮಡಿಕೇರಿ: ಕರ್ತವ್ಯನಿರತ ಮಹಿಳಾ ಹೋಂಗಾರ್ಡ್ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಗೆ ಗೂಸಾ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ಸಮೀಪದ ನೀರುಕೊಲ್ಲಿಯ ಬಾಬು ಎಂಬುವನ ವಿರುದ್ಧ ಅನುಚಿತ ವರ್ತನೆ ತೋರಿದ ಆರೋಪ ಮಾಡಲಾಗಿದ್ದು, ಪ್ರಸ್ತುತ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಡಿಕೇರಿ ನಗರದ ತಿಮ್ಮಯ್ಯ ವೃತ್ತದಲ್ಲಿ ಇಂದು ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಹೋಂಗಾರ್ಡ್ ಬಳಿ ಕಂಠ ಪೂರ್ತಿ ಕೂಡಿದು ಬಂದ ಆರೋಪಿ ಬಾಬು ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಅವರ ಕೈಮುಟ್ಟಲು ಯತ್ನಿಸಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಹೋಂಗಾರ್ಡ್ ಸ್ಥಳದಲ್ಲೇ ಆರೋಪಿಗೆ ಗೂಸಾ ನೀಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸರು ಹಾಗೂ ನಗರ ಠಾಣಾ ಪೊಲೀಸರು ಘಟನೆಗೆ ಸಾಕ್ಷಿಯಾಗಿದ್ದು, ವ್ಯಕ್ತಿಯ ವಿರುದ್ಧ ಮಡಿಕೇರಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರುವ ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಮಹಿಳಾ ಹೋಂಗಾರ್ಡ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

https://www.youtube.com/watch?v=4f_slkGJl9I