ಭೋಪಾಲ್: ಪ್ರಿಯಕರನ (Boy Friend) ಬಳಿ ಯುವತಿಯೊಬ್ಬಳು ತನ್ನನ್ನು ಮದುವೆಯಾಗುವಂತೆ ಕೇಳಿದ್ದಕ್ಕೆ ಆಕೆಯನ್ನೇ ಆತ ಥಳಿಸಿದ ಘಟನೆ ಮಧ್ಯಪ್ರದೇಶದ (Madhya Pradesh) ರೇವಾ ಜಿಲ್ಲೆಯಲ್ಲಿ ನಡೆದಿದೆ.
ಮೌಗಂಜ್ ಪ್ರದೇಶದ ಧೇರಾ ಗ್ರಾಮದ 24 ವರ್ಷದ ನಿವಾಸಿಯು 19 ವರ್ಷದ ಯುವತಿಯೊಂದಿಗೆ ಸಂಬಂಧವನ್ನು ಹೊಂದಿದ್ದನು. ಇದೇ ಸಲುಗೆಯಲ್ಲೇ ಯುವತಿಯು ಆತನ ಬಳಿ ತನ್ನ ಮದುವೆ ಆಗುವಂತೆ ತಿಳಿಸಿದ್ದಾಳೆ. ಆದರೆ ಆತ ಒಪ್ಪಲಿಲ್ಲ. ಅಷ್ಟೇ ಅಲ್ಲದೇ ಇದೇ ವಿಷಯಕ್ಕೆ ಅವರ ನಡುವೆ ಜಗಳ ಸಂಭವಿಸಿದೆ. ಈ ಜಗಳವೇ ಮಿತಿ ಮೀರಿದ್ದು, ಆತ ಅವಳನ್ನು ಥಳಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ.
ವೀಡಿಯೋದಲ್ಲಿ ಏನಿದೆ?: ಯುವತಿಯು ಆರೋಪಿ ಬಳಿ ತನ್ನನ್ನು ಮದುವೆಯಾಗುವಂತೆ (Marriage) ಕೇಳುತ್ತಾಳೆ. ಈ ಹಿನ್ನೆಲೆಯಲ್ಲಿ ಆತ ಕಿರಿಕಿರಿಗೊಳ್ಳುತ್ತಾನೆ. ಅದಾದ ಬಳಿಕ ಆಕೆಯ ಮುಖಕ್ಕೆ ಪದೇ ಪದೇ ಹೊಡೆಯುತ್ತಾನೆ. ಇದನ್ನೂ ಓದಿ: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ – 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಆದರೆ ಆಕೆ ದೂರು ನೀಡಲು ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಇದನ್ನೂ ಓದಿ: ಕೈ ನಾಯಕ ಅಲ್ತಾಫ್ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ