ಚಿಕ್ಕಬಳ್ಳಾಪುರ: ಸ್ಕ್ರೂಡ್ರೈವರ್ ಮೂಲಕ ಪತ್ನಿಯ ಕತ್ತು, ಎದೆಗೆ ಚುಚ್ಚಿ ಪತಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದೆ. ಗಾಯಗೊಂಡಾಕೆಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ಈಕೆಯನ್ನು ಗಂಡ ರಾಜೇಶ್ ಕೊಲೆ ಮಾಡಲು ಯತ್ನಿಸಿದ್ದಾನೆ.
ಏಮಿದು ಘಟನೆ..?: ಪ್ರೀತಿಸಿ ಮದುವೆ (Nirmala- Rajesh Love Marriage) ಯಾದ ನಿರ್ಮಲಾ, ಪತಿ ರಾಜೇಶ್ನನ್ನು ಬಿಟ್ಟು ತಿಂಗಳಿಂದ ನಾಪತ್ತೆಯಾಗಿದ್ದಳು. ಹೆಂಡತಿ ಎಲ್ಲೋ ಹೊದ್ಲು ಅಂತ ಹುಡುಕಾಡ್ತಿದ್ದ ಗಂಡನ ಕಣ್ಣಿಗೆ ಕಂಡಿದ್ದೇ ತಡ, ಹೆಂಡತಿನಾ ಜೊತೆ ಬರುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಆದರೆ ಹೆಂಡತಿ ನಾನು ಬರಲ್ಲ ಅಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗಂಡ ಆಕೆಯ ಮುಖಮೂತಿ ನೋಡದೆ ಸ್ಕ್ರೂಡ್ರೈವರ್ನಿಂದ ಕುತ್ತಿಗೆಗೆ ಚುಚ್ಚಿ ಹಾಗೂ ಚಾಕುವಿನಿಂದ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆ ಸೇರಿದ್ದಾಳೆ. ಇತ್ತ ಗಂಡ, ಹೆಂಡತಿ ಸತ್ತೇ ಹೋದಳು ಅನ್ನೋ ಭಯದಿಂದ ಬಾರ್ಗೆ ಹೋಗಿ ಎಣ್ಣೆ ಕುಡಿದು ನಶೆಯಲ್ಲಿ ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದನ್ನೂ ಓದಿ: ಅಂಕೋಲಾ ಬಸ್ ನಿಲ್ದಾಣದಲ್ಲಿ ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು ಹೊಗಳಿದ ಆನಂದ್ ಮಹೇಂದ್ರ
Advertisement
Advertisement
ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಿಮ್ಮಲಕುಂಟೆ ನಿವಾಸಿಯಾಗಿರುವ ರಾಜೇಶ್, ವೃತ್ತಿಯಲ್ಲಿ ಬೋರ್ ಮೋಟಾರ್ ರಿಪೇರಿ ಮಾಡುತ್ತಿದ್ದಾನೆ. ಈತ ಬೆಂಗಳೂರಿನ ಕೆ.ಆರ್ ಪುರಂನ ಲೀಲಾ ಜೊತೆ ಮೊದಲ ಮದುವೆಯಾಗಿದ್ದ. ಆದರೆ ಲೀಲಾ ಬಾಣಂತಿಗೆ ತವರು ಮನೆ ಸೇರಿದಾಗ ಆಕೆಯ ಅಕ್ಕ ನಿರ್ಮಲಾಳನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ನಂತರ ಕೂಲಿ ಅರಸಿ ಊರೂರು ಅಲೆದು ಸಂಸಾರ ನಡೆಸುತ್ತಿದ್ದರು. ಆದರೆ ಕಳೆದ 1 ತಿಂಗಳ ಹಿಂದೆ ದಿಬ್ಬೂರಹಳ್ಳಿಯಲ್ಲಿ ವಾಸವಿದ್ದಾಗ ನಿರ್ಮಲಾ, ರಾಜೇಶ್ ಗೆ ಏನೂ ಹೇಳದೆ ಹೊರಟು ಹೋಗಿದ್ದಳು. ಹೀಗಾಗಿ ಹೆಂಡತಿ ಹುಡುಕಾಟ ನಡೆಸುತ್ತಿದ್ದ ರಾಜೇಶ್ ಗೆ ನಿನ್ನೆ ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿ ಬಳಿ ನಿರ್ಮಲಾ ಕಂಡಿದ್ದಾಳೆ.
Advertisement
ಸ್ನೇಹಿತೆ ಸುನೀತಾ ಮನೆಯಲ್ಲಿದ್ದ ನಿರ್ಮಲಾಳನ್ನ ಪರಿಪರಿಯಾಗಿ ತನ್ನ ಜೊತೆ ವಾಪಸ್ ಬರುವಂತೆ ಕೇಳಿಕೊಂಡಿದ್ದಾನೆ. ಆದರೆ ನಾನು ನಿನ್ನ ಜೊತೆ ಬರಲ್ಲ ನನ್ನ ಮರ್ಯಾದೆ ತೆಗೀಬೇಡಿ ಅಂತ ಗಲಾಟೆ ಮಾಡಿದ್ದಾಳೆ. ಇದರಿಂದ ರೋಸಿ ಹೋದ ರಾಜೇಶ್, ಸುನೀತಾ ಮನೆಯಲ್ಲಿಯೇ ಇದ್ದ ಸ್ಕ್ರೂಡ್ರೈವರ್ ತಗೊಂಡು ನಿರ್ಮಲಾ ಕುತ್ತಿಗೆಗೆ ಇರಿದಿದ್ದಾನೆ. ತನ್ನ ಬಳಿಯೇ ಇದ್ದ ಚಿಕ್ಕ ಚಾಕುವಿನಿಂದ ಎದೆ ಹಾಗೂ ಕುತ್ತಿಗೆ ಮುಖದ ಮೇಲೆ ಕೊಯ್ದಿದ್ದಾನೆ.
Advertisement
ನಿರ್ಮಲಾ ಹೇಳೋ ಪ್ರಕಾರ, ಎಡಗೈ ಮೂಳೆ ಸಮಸ್ಯೆಗೆ ಗಂಡ ಚಿಕಿತ್ಸೆ ಕೊಡಿಸ್ತಿಲ್ಲ ಅಂತ ತವರು ಮನೆ ಸೇರಿದ್ದೆ. ಚಿಕಿತ್ಸೆ ಪಡೆಯೋಕೆ ದುಡ್ಡು ಇಲ್ಲ ಅಂತ ಮುದ್ದೇನಹಳ್ಳಿಯ ಪ್ರೀ ಹಾಸ್ಪಿಟಲ್ ಗೆ ಟ್ರೀಟ್ ಮೆಂಟ್ ಗೆ ಅಂತ ಬಂದಿದ್ದೆ. ಈ ವೇಳೆ ಸ್ನೇಹಿತೆ ಸುನೀತಾ ಸಿಕ್ಕಿದರು. ಅವರ ಮನೆಗೆ ಹೋಗಿದ್ದೆ. ಆದರೆ ಅಲ್ಲಿಗೆ ನನ್ನ ಗಂಡ ಬಂದು ಏಕಾಏಕಿ ಗಲಾಟೆ ಮಾಡಿ ಮರ್ಡರ್ ಮಾಡೋಕೆ ಮುಂದಾದನು. ಈ ವೇಳೆ ಸುನೀತಾ ಸಹ ನಿರ್ಮಲಾ ರಕ್ಷಣೆಗೆ ಮುಂದಾಗಿದ್ದು, ಆಕೆಯ ಕೈಗೆ ಗಾಯವಾಗಿದೆ ಎಂದು ತಿಳಿಸಿದ್ದಾಳೆ.
ಸದ್ಯ ಗಾಯಾಳು ನಿರ್ಮಲಾಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.