ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಇರಿದ ಪಾಪಿ ಪತಿ!

Public TV
1 Min Read
HASSAN 3

ಹಾಸನ: ದೂರು ಕೊಟ್ಟ ಪತ್ನಿಗೆ ಪತಿ ಠಾಣೆಯಲ್ಲೇ ಇರಿದ ಘಟನೆಯೊಂದು ಹಾಸನದಲ್ಲಿ (Hassan) ನಡೆದಿದೆ.

ಗಾಯಾಳು ಪತ್ನಿಯನ್ನು ಶಿಲ್ಪ ಎಂದು ಗುರುತಿಸಲಾಗಿದ್ದು, ಈಕೆಯ ಕೊಲೆಗೆ ಪತಿ ಹರೀಶ್ ಯತ್ನಿಸಿದ್ದಾನೆ. ಈ ಘಟನೆ ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಆರು ವರ್ಷದ ಹಿಂದೆ ಮದುವೆಯಾಗಿದ್ದ ಶಿಲ್ಪಾ- ಹರೀಶ್, ಪರಸ್ಪರ ಅನುಮಾನದಿಂದ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಂತೆಯೇ ಗಂಡನಿಂದ ಕಿರುಕುಳ ಎಂದು ಶಿಲ್ಪಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪತಿ ಹರೀಶ್ ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾಗಲೇ ಹತ್ಯೆಗೆ ಯತ್ನ ನಡೆದಿದೆ. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದತ ತಪ್ಪಿದೆ. ಚಾಕು ಕಿತ್ತುಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: 2 ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದ ಸಾವು

Share This Article