ಸಿಎಂ ಮಂಗಳೂರು ಪ್ರವಾಸದಲ್ಲಿದ್ದಾಗಲೇ ಅಹಿತಕರ ಘಟನೆ – ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌

Public TV
1 Min Read
Crime

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಗಳೂರು ಪ್ರವಾಸದಲ್ಲಿದ್ದಾಗಲೇ ಅಹಿತಕರ ಘಟನೆ ನಡೆದಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಅಕ್ಕರಂಗಡಿ ಬಳಿ ವ್ಯಕ್ತಿಯೊಬ್ಬರ ಮೇಲೆ ತಲ್ವಾರ್‌ನಿಂದ ದಾಳಿ ನಡೆದಿದೆ.

ಸ್ಥಳೀಯ ನಿವಾಸಿ ಹಮೀದ್ ಹಲ್ಲೆಗೊಳಗಾದ ವ್ಯಕ್ತಿ. ಶುಕ್ರವಾರ ಸಂಜೆ ವೇಳೆಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾಗಿರುವ ಹಮೀದ್‌ನನ್ನ ಮಂಗಳೂರು ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮಂಗಳೂರು ಭೇಟಿ ‘ಬಂದ ಪುಟ್ಟ ಹೋದ ಪುಟ್ಟ’ ಆಗದಿರಲಿ: ಕ್ಯಾ.ಬ್ರಿಜೇಶ್ ಚೌಟ

ಮೇಲ್ನೋಟಕ್ಕೆ ಹ್ಯಾರಿಸ್ ಎಂಬಾತನ ಗ್ಯಾಂಗ್‌ನಿಂದ ವೈಯಕ್ತಿಕ ದ್ವೇಷಕ್ಕೆ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ನನ್ನ ಪತಿ ಒಂಥರಾ ಮಾನಸಿಕ ಅಸ್ವಸ್ಥ, ಆಸ್ತಿಗಾಗಿ ಹಿರಿಯ ಮಗಳ ಸಂಚು: ಚೈತ್ರಾ ತಾಯಿ

ಸಿಎಂ ಪ್ರವಾಸದಲ್ಲಿದ್ದಾಗಲೇ ಘಟನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಗಳೂರು ಪ್ರವಾಸದಲ್ಲಿದ್ದರು. ಇಲ್ಲಿನ ನೂತನ ಜಿಲ್ಲಾಧಿಕಾರಿ ಕಚೇರಿ, ಡಿಸಿ ಕಚೇರಿಯ ನಾಮಫಲಕ ಉದ್ಘಾಟಿಸಿ ಹಲವು ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಜೊತೆಗೆ ವಿವಿಧ ಇಲಾಖೆಗಳ ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದರು. ಈ ಹೊತ್ತಿನಲ್ಲೇ ಬಂಟ್ವಾಳದಲ್ಲಿ ಅಹಿತಕರ ಗಟನೆ ನಡೆದಿದೆ. ಇದನ್ನೂ ಓದಿ: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ – 6 ಮಂದಿ ರಕ್ಷಣೆ

Share This Article