Saturday, 21st July 2018

ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

ಕೈರೋ: ಮದುವೆ ಹಿಂದಿನ ದಿನ ವರನ ಜೊತೆ ಸ್ನೇಹಿತರು ಸಂಭ್ರಮಾಚರಣೆ ಮಾಡೋ ಸಂದರ್ಭದಲ್ಲಿ ಅತೀ ಉತ್ಸಾಹದಲ್ಲಿ ಸ್ನೇಹಿತನೊಬ್ಬ ವರನ ಮರ್ಮಾಂಗಕ್ಕೆ ಗುಂಡೇಟು ಹೊಡೆದಿರುವ ಘಟನೆ ಈಜಿಪ್ಟ್‍ನಲ್ಲಿ ನಡೆದಿದೆ.

28 ವರ್ಷದ ವರ ಓಮರ್ ಅಲ್ ಅಲ್‍ಸೈದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಓಮರ್ ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯ ಸಂಭ್ರಮದಲ್ಲಿದ್ದ. ಈ ವೇಳೆ ಸ್ನೇಹಿತರಲ್ಲೊಬ್ಬ ಸಂಭ್ರಮಾಚರಣೆಗೆ ಗುಂಡು ಹಾರಿಸಿದ್ದ. ಉತ್ಸಾಹದಲ್ಲಿ ಗುಂಡು ಹಾರಿಸಿದ ಸ್ನೇಹಿತನಿಗೆ ಗನ್ ಮೇಲಕ್ಕೆ ಗುರಿಯಿಡಬೇಕು ಅನ್ನೋದು ಮರೆತುಹೋಗಿತ್ತು. ಪರಿಣಾಮ ಗುಂಡು ವರನ ಮರ್ಮಾಂಗಕ್ಕೆ ತಗುಲಿದೆ.

ಘಟನೆಯಿಂದ ಓಮರ್‍ನ ಮರ್ಮಾಂಗ, ತೊಡೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ತಾನು ಮಾಡಿದ ಎಡವಟ್ಟಿನಿಂದ ಸ್ನೇಹಿತ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಅತ್ತ ಗಾಯಗೊಂಡ ಓಮರ್ ಇನ್ನೂ ಬ್ಯಾಚುಲರ್ ಆಗಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಓಮರ್‍ನ ಭಾವಿ ಪತ್ನಿಗೆ ಮುಂದೆ ಆತನನ್ನು ಮದುವೆಯಾಗೋ ಯೋಚನೆ ಇದೆಯಾ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಈಜಿಪ್ಟ್‍ನ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ. ಗನ್ ಸರಿಯಾಗಿ ಹಿಡಿಯಲು ಬಾರದ ವರನ ಸ್ನೇಹಿತನ ಬಗ್ಗೆ ಜನ ಟೀಕಿಸಿದ್ದಾರೆ.

ಈಜಿಪ್ಟ್ ನಲ್ಲಿ ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿ ಅನಾಹುತವಾಗಿರೋದು ಇದೇ ಮೊದಲೇನಲ್ಲ. ಅಕ್ಟೋಬರ್‍ನಲ್ಲಿ ಇಲ್ಲಿನ ಮದುವೆ ಸಮಾರಂಭವೊಂದಲ್ಲಿ ಅತಿಥಿಗೆ ಗುಂಡೇಟು ತಗುಲಿ ಸರ್ಜರಿಗೆ ಒಳಪಡಬೇಕಾಯ್ತು. ಈಜಿಪ್ಟ್ ನ ಬಾನಿ ಸ್ವೆಫ್‍ನಲ್ಲಿ 30 ವರ್ಷದ ವ್ಯಕ್ತಿ ಮುದವೆಗೆ ಬಂದಿದ್ದಾಗ ಅವರ ತೊಡೆಗೆ ಗುಂಡೇಟು ತಗುಲಿತ್ತು. ಅವರಿಗೆ ಸರ್ಜರಿ ಮಾಡಿಸಬೇಕಾಯ್ತು.

Leave a Reply

Your email address will not be published. Required fields are marked *