ಮಂಡ್ಯ: ಪೊಲೀಸ್ ಠಾಣೆಯಲ್ಲಿಯೇ (Mandya Police Station) ಪೊಲೀಸ್ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
ಸಾಗರ್ ಎಂಬಾತ ಪೊಲೀಸ್ ಸಿಬ್ಬಂದಿಗೆ ಅವಾಜ್ ಹಾಕಿ ಹಲ್ಲೆ ನಡೆಸಿದ್ದಾನೆ. ಜಮೀನು ವಿವಾದದ (Land Dispute) ಸಂಬಂಧ ಸಾಗರ್ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ಸಾಗರಗಳನ್ನು ಪೊಲೀಸರು ಕರೆಸಿದ್ದರು. ಇದನ್ನೂ ಓದಿ: ಸಿಖ್ ಸಂಪ್ರದಾಯದಂತೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ; ಗೌರವ ಸಮರ್ಪಣೆ
ಈ ವೇಳೆ ಪೊಲೀಸ್ ಪೇದೆ ಅಭಿಷೇಕ್ ಹಾಗೂ ಸಾಗರ್ ನಡುವೆ ಮಾತಿನ ಚಕಮಕಿ ಆಗಿದೆ. ಈ ವೇಳೆ ಪೇದೆ ಅಭಿಷೇಕ್ ಸಾಗರ್‌ಗೆ ಒಂದು ಏಟು ಹೊಡೆದಿದ್ದಾರೆ. ನಂತರ ಸಾಗರ್ ಪೇದೆ ಅಭಿಷೇಕ್‌ಗೆ ಅವಾಜ್ ಹಾಕಿ ಹೊಡೆದಿದ್ದಾನೆ. ಹಲ್ಲೆ ನಡೆಸಿದ್ದಲ್ಲದೇ ಪೇದೆ ಕುತ್ತಿಗೆ ಪಟ್ಟಿ ಹಿಡಿದು ಹಲ್ಲೆ ನಡೆಸಿ ಸಾಗರ್ ಪರಾರಿಯಾಗಲು ಯತ್ನಿಸಿದ್ದಾನೆ.
ಬಳಿಕ ಸಾಗರ್ ನನ್ನ ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಿತ್ತು ಕಂಡೀಷನ್ – ಡ್ರಂಕ್ & ಡ್ರೈವ್ ಮಾಡಿ ತಗ್ಲಾಕೊಂಡ್ರೆ ಲೈಸೆನ್ಸ್ ರದ್ದು!