ಕಾರವಾರ: ಮಗು ನೋಡಲು ಬಂದ ಪ್ರಿಯತಮೆಯ ತಾಯಿಗೆ ಕುಡಿದ ಅಮಲಿನಲ್ಲಿ ಆಸ್ಪತ್ರೆಯಲ್ಲೇ ಚಾಕು ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಕದ್ರಾ ಮೂಲದ ಮಮ್ಮದಬೀ ಚಾಕು ಇರಿತಕ್ಕೊಳಗಾಗಿದ್ದು, ದಾಂಡೇಲಿ ಮೂಲದ ರಮಜಾನ್ ಚಾಕು ಇರಿದವನಾಗಿದ್ದಾನೆ. ರಮಜಾನ್ ಮಮ್ಮದಬೀ ಮಗಳ ಜೊತೆ ಮದುವೆಯಾಗದೇ 4 ವರ್ಷಗಳಿಂದ ಲಿವಿಂಗ್ ರಿಲೇಷನ್‌ನಲ್ಲಿದ್ದ. ಮದುವೆಯಾಗದೇ ಮಗು ಆಗಿದ್ದಕ್ಕೆ ಮಮ್ಮದಬೀ ರಮಜಾನ್‌ನೊಂದಿಗೆ ಜಗಳವಾಡಿದ್ದರು. ಇದನ್ನೂ ಓದಿ: ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿಗೆ ಕಚ್ಚಿದ ಇಲಿ

ಚಾಕು ಇರಿತಕ್ಕೊಳಗಾದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

