ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಸ್ ಅವರು ಕನ್ಯತ್ವ ಯಾವಾಗ ಕಳೆದುಕೊಂಡ್ರಿ ಎಂದು ಕೇಳಿದ ಅಭಿಮಾನಿಗೆ ಚಳಿ ಬಿಡಿಸಿದ್ದಾರೆ.
ಇಲಿಯಾನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಶ್ನೆ ಕೇಳಿ ಎಂದು ಬರೆದುಕೊಂಡಿದ್ದರು. ಈ ವೇಳೆ ಹಲವು ಅಭಿಮಾನಿಗಳು ಪ್ರಶ್ನೆಯನ್ನು ಕೇಳಿದ್ದಾರೆ. ಕೆಲವರು ಅವರ ಮುಂದಿನ ಸಿನಿಮಾಗಳ ಬಗ್ಗೆ ಪ್ರಶ್ನಿಸಿದ್ದರೆ, ಮತ್ತೆ ಕೆಲವರು ಇಲಿಯಾನಾ ಅವರ ಇಷ್ಟಗಳ ಬಗ್ಗೆ ಕೇಳಿದ್ದಾರೆ.
Advertisement
ಈ ನಡುವೆ ವ್ಯಕ್ತಿಯೊಬ್ಬ ಇಲಿಯಾನಾ ಅವರಿಗೆ ನೀವು ಕನ್ಯತ್ವ ಯಾವಾಗ ಕಳೆದುಕೊಂಡ್ರಿ ಎಂದು ಪ್ರಶ್ನಿಸಿದ್ದಾನೆ. ಅಭಿಮಾನಿ ಪ್ರಶ್ನೆಗೆ ಕೆರಳಿದ ಇಲಿಯಾನಾ, “ನೀವು ಬೇರೆಯವರ ವಿಷಯಕ್ಕೆ ತುಂಬಾ ತಲೆ ಹಾಕುತ್ತೀರಾ. ನಿಮ್ಮ ತಾಯಿ ಏನು ಹೇಳುತ್ತಾರೆ” ಎಂದು ಉತ್ತರಿಸುವ ಮೂಲಕ ಗರಂ ಆಗಿದ್ದಾರೆ. ಇಲಿಯಾನಾ ಅವರ ಈ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಇತ್ತೀಚೆಗೆ ಇಲಿಯಾನಾ ಅವರು ತಮ್ಮ ಬಹುಕಾಲದ ಆಸ್ಟ್ರೇಲಿಯಾ ಗೆಳೆಯನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್ನಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಹಾಗೂ ಅವರ ಗೆಳೆಯ ಆ್ಯಂಡ್ರ್ಯೂ ನೀಬೋನ್ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಇಬ್ಬರು ತಮ್ಮ ಸಂಬಂಧದಿಂದ ದೂರವಾಗಿದ್ದಾರೆ ಎನ್ನಲಾಗಿತ್ತು. ಇದರ ನಡುವೆ ಇಲಿಯಾನಾ, ಆ್ಯಂಡ್ರ್ಯೂ ಜೊತೆಯಿರುವ ಫೋಟೋಗಳನ್ನು ಇನ್ಸ್ಟಾದಲ್ಲಿ ಡಿಲೀಟ್ ಮಾಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು.
Advertisement
ಸದ್ಯ ಇಲಿಯಾನಾ ‘ಪಾಗಲ್ಪಂತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ಈ ಚಿತ್ರ ಬಿಡುಗಡೆ ಆಗಲಿದೆ.