ಬೆಂಗಳೂರು: ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿ ಪತ್ನಿಯ ಮೇಲೆ ಎರಚಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಥಾಮಸ್ ಎಂದು ಗುರುತಿಸಲಾಗಿದ್ದು, ಈತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಜನವರಿ 30 ರಂದು ಆಡುಗೋಡಿಯ ಎಲ್ ಆರ್ ನಗರದಲ್ಲಿ ಹೆಂಡತಿ ಅಂಥೋಣಿಯಮ್ಮ ಮೇಲೆ ಥಾಮಸ್ ಬಿಸಿ ಎಣ್ಣೆ ಸುರಿದಿದ್ದನು.
ಅನೈತಿಕ ಸಂಬಂಧ ಇದೆ ಎಂದು ಪತ್ನಿಯ ಮೇಲೆ ಥಾಮಸ್ ಸಂಶಯ ಪಟ್ಟಿದ್ದನು. ಇದೇ ವಿಚಾರವಾಗಿ ಪತ್ನಿಯೊಂದಿಗೆ ಗಲಾಟೆ ಕೂಡ ಮಾಡಿದ್ದನು. ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿ ಮೂರ್ಛೆ ತಪ್ಪಿಸಿದ್ದನು. ನಂತರ ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿದ್ದ. ಎಣ್ಣೆ ಕುದಿಯುತ್ತಿದ್ದಂತೆಯೇ ಅದನ್ನು ಪತ್ನಿ ಮೇಲೆ ಎರಚಿದ್ದ.
ಹೆಂಡತಿ ಮುಖ, ಎದೆ, ಹೊಟ್ಟೆ, ಕಾಲು ಹಾಗೂ ಕೈಗಳ ಮೇಲೆ ಎಣ್ಣೆ ಸುರಿದಿದ್ದ. ಇತ್ತ ಅಮ್ಮನ ಮೇಲೆ ಎಣ್ಣೆ ಎರಚಿದಾಗ ಅಡ್ಡ ಬಂದ ಮಗಳ ಮೇಲೂ ಎಣ್ಣೆ ಚೆಲ್ಲಿದೆ. ಸದ್ಯ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಗಾಯಾಳು ಅಂಥೋಣಿಯಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಹಾಸ್ಟೆಲ್ಗೆ ಟ್ರಾವೆಲ್ ಬ್ಯಾಗ್ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ