CrimeDistrictsKarnatakaLatestMain Post

ಶವಾಗಾರದಲ್ಲಿ ಹೆಣಗಳ ಬೆತ್ತಲೆ ಫೋಟೋ ಸೆರೆಹಿಡಿಯುತ್ತಿದ್ದವ ಅಂದರ್

- ಯುವತಿಯರ ಜೊತೆ ಪಲ್ಲಂಗದಾಟ

– ವೃದ್ಧೆಯ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನ

ಮಡಿಕೇರಿ: ಕೊಡಗು (Kodagu) ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕಡಗದಾಳು ನಿವಾಸಿ ಸೈಯದ್ (24) ಎಂಬಾತನನ್ನು ಮಾನ ಭಂಗ ಯತ್ನದ ಆರೋಪದಡಿ ಬಂಧಿಸಲಾಗಿದೆ.

ಮಡಿಕೇರಿಯ 74 ವರ್ಷದ ವೃದ್ಧೆಯೋರ್ವರ ಮನೆಗೆ ನುಗ್ಗಿದ ಸೈಯದ್, ಮಾನ ಭಂಗಕ್ಕೆ ಯತ್ನ ಮಾಡಿರುವುದಾಗಿ ಮಡಿಕೇರಿ ನಗರ ಠಾಣೆ (Madikeri City Police) ಗೆ ವೃದ್ಧೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಯದ್‍ನನ್ನು ಬಂಧಿಸಿದ್ದಾರೆ.

ಸೈಯದ್ ಇತ್ತೀಚೆಗಷ್ಟೆ ಕೆಲಸಕ್ಕೆ ರಾಜೀನಾಮೆ ನೀಡಿದ್ದನು. ಕಳೆದ ಸೆಪ್ಟೆಂಬರ್ 22 ರಂದು ರಾತ್ರಿ ಸುಮಾರು 11 ಗಂಟೆಗೆ ವೃದ್ಧೆ ಮನೆಗೆ ಆಗಮಿಸಿದ ಸೈಯದ್ ಮನೆ ಬಾಗಿಲು ಬಡಿದಿದ್ದಾನೆ. ವೃದ್ಧೆ ಬಾಗಿಲು ತೆರೆದಕ್ಷಣ ಸೈಯದ್ ಮನೆ ಒಳಗೆ ನುಗ್ಗಿ ಮಾನ ಭಂಗಕ್ಕೆ ಯತ್ನಿಸಿದ್ದಾನೆ. ವೃದ್ಧೆ ಈ ಸಂದರ್ಭದಲ್ಲಿ ಜೋರಾಗಿ ಕಿರುಚಿಕೊಂಡಿದ್ದು, ಪಕ್ಕದ ಮನೆಯವರು ಹೊರಬರುವಷ್ಟರಲ್ಲಿ ಸೈಯದ್ ತಲೆಮರೆಸಿಕೊಂಡಿದ್ದಾನೆ.

ಈ ಸಂದರ್ಭ ತನ್ನ ಫೋನ (Mobile Phone) ನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನನ್ವಯ ಮಡಿಕೇರಿ ನಗರ ಠಾಣೆ ಉಪನಿರೀಕ್ಷಕ ಅವರು ಸೆಕ್ಷನ್ 446 ಹಾಗೂ 354ನಡಿ ಪ್ರಕರಣ ದಾಖಲಿಸಿ ಸೈಯದ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಸೈಯದ್ ಮೊಬೈಲ್ ಘೋನನ್ನು ದೂರುದಾರರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶವಾಗಾರದಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ಸೈಯದ್ ಶವಾಗಾರದಲ್ಲಿನ ಮೃತ ದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಫೋನಿನಲ್ಲಿ ಸೆರೆ ಹಿಡಿಯುತ್ತಿದ್ದ ಎಂಬುದಾಗಿ ಈ ಹಿಂದೆ ಹಿಂದೂಪರ ಸಂಘಟನೆ ದೂರು ನೀಡಿದ್ದು, ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಮಡಿಕೇರಿ ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button