ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್

Public TV
1 Min Read
BIRD TRAY

ವಾಷಿಂಗ್ಟನ್: ತಮ್ಮ ಮನೆಯ ಹುಲ್ಲು ಹಾಸಿನಲ್ಲಿ ಪಕ್ಷಿಗಳಿಗೆ ನೀರು, ಆಹಾರ ಇಡುವ ಟ್ರೇಗಳನ್ನು ಹೊಂದಿದ್ದಕ್ಕಾಗಿಯೇ ವ್ಯಕ್ತಿಯೊಬ್ಬನನ್ನು 3 ವಾರಗಳಲ್ಲಿ 3 ಬಾರಿ ಬಂಧಿಸಿರುವ ಘಟನೆ ನ್ಯೂಯಾರ್ಕ್‌ನ ಸೋಡನ್ ಪಾಯಿಂಟ್‌ನಲ್ಲಿ ನಡೆದಿದೆ.

Foreign Birds 1
ಸಾಂದರ್ಭಿಕ ಚಿತ್ರ

71 ವರ್ಷದ ಡೊನಾಲ್ಡ್ ಅಂಟಾಲ್ ಸುಮಾರು ಎರಡು ಡಜನ್ ಫೀಡರ್‌ಗಳನ್ನು ಹೊಂದಿರುವುದಾಗಿ ಸ್ಥಳೀಯರು ನೀಡಿದ ದೂರಿನ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಇದು ವಿಲೇಜ್ ಆಫ್ ಸೋಡಸ್ ಪಾಯಿಂಟ್ ಸ್ಥಳೀಯ ಸುಗ್ರೀವಾಜ್ಞೆ 57-6B(1) ಉಲ್ಲಂಘನೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಇದನ್ನೂ ಓದಿ: ನೂಪುರ್ ವಿರುದ್ಧ ಪ್ರತಿಭಟಿಸಿದವರು ಕುವೈತ್‍ನಿಂದ ಗಡಿಪಾರು – ನಮ್ಮಲ್ಲಿ ಕಠಿಣ ಕ್ರಮ ಯಾವಾಗ ಎಂದ ನೆಟ್ಟಿಗರು?

CRIME

ಸ್ಥಳೀಯರ ದೂರಿನ ಪ್ರಕಾರ, ಈತ ಪಕ್ಷಿಗಳಿಗಾಗಿ ಕಡೆಲೆಕಾಯಿ ಹಾಗೂ ಇತರ ಆಹಾರ ಬೀಜಗಳನ್ನು ಟ್ರೇನಲ್ಲಿ ಇಡುತ್ತಿದ್ದ. ಈ ಮೂಲಕ ಸಾಕಷ್ಟು ಪಕ್ಷಿಗಳನ್ನು ಆಕರ್ಷಿಸಲಾಗುತ್ತಿತ್ತು. ಇದಕ್ಕಾಗಿ ವನ್ಯಜೀವಿಗಳನ್ನು ಪೋಷಿಸಿದ ಆರೋಪ ಹೊರಿಸಲಾಗಿತ್ತು. ಆದರೆ ಆಲ್ ಕಾಪ್ಸ್ ಆಂಟಿ-ಬರ್ಡ್ ಸಹಾಯದೊಂದಿಗೆ ಪೊಲೀಸರು ತನಿಖೆ ನಡೆಸಿದ ಬಳಿಕ ಕೆಲ ಪಕ್ಷಿಗಳಲ್ಲಿ ಹೆಚ್ಚು ಹುಳುಗಳು ಪತ್ತೆಯಾಗುತ್ತಿತ್ತು. ಇದು ಸ್ಥಳೀಯರನ್ನು ಬಾಧಿಸುತ್ತಿತ್ತು ಎಂಬುದು ತಿಳಿದುಬಂದಿತು. ಆದ್ದರಿಂದಲೇ ವ್ಯಕ್ತಿಯನ್ನು ಬಂಧಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

Share This Article
Leave a Comment

Leave a Reply

Your email address will not be published. Required fields are marked *