ಪಾಟ್ನಾ: ರಸ್ತೆಯಲ್ಲಿಯೇ ಶಾಲಾ ಹುಡುಗಿಯೊಬ್ಬಳ ಬಟ್ಟೆ ಎಳೆದು ಏಳು ಮಂದಿ ಕಾಮುಕರು ಆಕೆಗೆ ಕಿರುಕುಳ ನೀಡಿರುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಅನೇಕ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಳು ಆರೋಪಿಗಳು ಸಂತ್ರಸ್ತೆ ಅಳುತ್ತಾ ಸಹಾಯಕ್ಕೆ ಅಂಗಲಾಚಿದರೂ ಬಿಡದೇ ಕಿರುಕುಳ ನೀಡಿದ್ದಾರೆ. ಈ ವಿಡಿಯೋ 40 ಸೆಕೆಂಡ್ ಗಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಮವಾರ ಪೊಲೀಸರು ತನಿಖೆ ಮಾಡಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳನ್ನು ಪತ್ತೆ ಮಾಡಬೇಕಾಗಿದೆ.
Advertisement
Advertisement
ಪಂಕಜ್ ಯಾದವ್ ಬಂಧಿತ ಆರೋಪಿ. ಈತ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದಾಗ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ಪೊಲೀಸ್ ಸಿಬ್ಬಂದಿಯೊಬ್ಬರಿಗೆ ವಾಟ್ಸಪ್ ಮೂಲಕ ಬಾಲಕಿಗೆ ಕಿರುಕುಳ ನೀಡುತ್ತಿರುವ ವಿಡಿಯೋ ಬಂದಿದೆ. ಅದನ್ನು ನೋಡಿದ ತಕ್ಷಣ ಎಲ್ಲ ಜಿಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಿದೆವು. ತಕ್ಷಣ ಘಟನೆ ನಡೆದ ಸ್ಥಳವನ್ನು ಪತ್ತೆ ಮಾಡಿ ನಂತರ ಸದಾರ್ ಪೊಲೀಸ್ ಠಾಣಾ ಪೊಲೀಸರು ಪಂಕಜ್ ಯಾದವ್ ನನ್ನು ಬಂಧಿಸಿದ್ದಾರೆ ಎಂದು ಸೂಪರಿಂಟೆಂಡೆಂಟ್ ಪೊಲೀಸ್ ರಾಕೇಶ್ ಕುಮಾರ್ ತಿಳಿಸಿದ್ದಾರೆ.
Advertisement
ನಾವು ಸಂತ್ರಸ್ತೆಯನ್ನು ಪತ್ತೆ ಮಾಡಿ ಆಕೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಸಂತ್ರಸ್ತೆ ಯಾವುದೇ ರೀತಿಯ ದೂರು ಸಲ್ಲಿಸಿಲ್ಲ. ಆದರು ನಾವು ವಿಡಿಯೋವನ್ನು ಆಧರಿಸಿದ ಪ್ರಕರಣವನ್ನು ದಾಖಲಿಸಿದ್ದೇವೆ. ಈ ವಿಡಿಯೋ ಬಂದ ಅಧಿಕಾರಿಯೊಬ್ಬರು ಎಫ್‍ಐಆರ್ ದಾಖಲಿಸಿದ್ದಾರೆ. ನಾವು ಎಲ್ಲ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಎಸ್‍ಪಿ ಹೇಳಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?
ಸಂತ್ರಸ್ತೆ ಸೈಕಲ್ ಮೂಲಕ ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದಳು. ಆಗ ಯುವಕರ ಗುಂಪೊಂದು ಆಕೆಯನ್ನು ಅಡ್ಡ ಗಟ್ಟಿ ಕಿರುಕುಳ ನೀಡಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಒಬ್ಬ ಆರೋಪಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಉಳಿದರು ಆತನನ್ನು ತಡೆದಿದ್ದಾರೆ. ನಂತರ ಆಕೆ ತಪ್ಪಿಕೊಳ್ಳಲು ಪ್ರಯತ್ನಿಸಿದಾಗ ಸಂತ್ರಸ್ತೆಯ ದುಪ್ಪಟ್ಟವನ್ನು ಎಳೆದಾಡಿ ಕಿರುಕುಳ ನೀಡಿದ್ದಾರೆ. ಆಗ ಸಂತ್ರಸ್ತೆ ತನ್ನನ್ನು ಬಿಡುವಂತೆ ಗೋಗರೆದಿದ್ದಾಳೆ. ಆದರೆ ಕಾಮುಕರು ಸಂತ್ರಸ್ತೆಯನ್ನು ಬಿಡದೆ ಕಿರುಕುಳ ನೀಡಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
Saharsa: One arrested after a video of a school girl being stripped&groped by 3 men on a road went viral. DSP Prabhakar Riwari says,"It can be seen in the video that a girl & her male friend is being ill-treated by some men. Case filed, victim identified. Probe underway."#Bihar pic.twitter.com/xuYeAIwX48
— ANI (@ANI) August 28, 2018
ಆರೋಪಿಯೊಬ್ಬನನ್ನು ಬಂಧಿಸಿದ ನಂತರ ಉಳಿದವರ ಪತ್ತೆ ಮಾಡುವುದು ಸುಲಭವಾಗಿದೆ. ಈಗಾಗಲೇ ಅವರಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv