ಬೆಂಗಳೂರು: ಪತ್ನಿಯನ್ನು (Wife) ಚಾಕುವಿನಿಂದ ಇರಿದು ಹತ್ಯೆಗೈದು ತಲೆಮರೆಸಿಕೊಂಡಿದ್ದ ಪಾಪಿ ಪತಿಯನ್ನು ಸರ್ಜಾಪುರ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗಂಗಿರೆಡ್ಡಿ ಎಂದು ಗುರುತಿಸಲಾಗಿದೆ. ಮನೆ ಬಾಡಿಗೆ ಹಣ ಪಡೆಯುವ ವಿಚಾರವಾಗಿ ಹಾಗೂ ಆಕೆಯ ಶೀಲವನ್ನು ಶಂಕಿಸಿ ಹೆಂಡತಿಯ ಜೊತೆ ಆರೋಪಿ ಆಗಾಗ ಗಲಾಟೆ ನಡೆಸುತ್ತಿದ್ದ. ಅಲ್ಲದೇ ಆರೋಪಿ ಬಾಡಿಗೆ ಹಣವನ್ನು ಕುಡಿದು ಹಾಳು ಮಾಡುತ್ತಿದ್ದ ಎಂದು ಪತ್ನಿಯೇ ಹಣ ಪಡೆಯುತ್ತಿದ್ದಳು. ಇದೇ ಕಾರಣಕ್ಕೆ ಗಂಗರೆಡ್ಡಿ ತನ್ನ ಪತ್ನಿ ಸುಜಾತ (41) ಎಂಬಾಕೆಯನ್ನು ಜೂ.3 ರಂದು ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಇದನ್ನೂ ಓದಿ: ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿತ ಪ್ರಕರಣ- ಮೂವರು ಪೊಲೀಸ್ ವಶಕ್ಕೆ
ಹತ್ಯೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ವಿರುದ್ಧದ ಅತ್ಯಾಚಾರ ಕೇಸ್ – ಬಸವನಗುಡಿ ನಿವಾಸದಲ್ಲಿ ಎಸ್‍ಐಟಿ ಮಹಜರು