ದಾವಣಗೆರೆ: ಹಿರಿಯ ನಾಗರಿಕರಿಗೆ ಹಣ (Money) ಡ್ರಾ ಮಾಡಿಕೊಡುವ ನೆಪದಲ್ಲಿ ಅವರ ಪಿನ್ ನಂಬರ್ ತಿಳಿದುಕೊಂಡು ಹಣ ಲಪಟಾಯಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ದಾವಣಗೆರೆ (Davanagere) ಜಿಲ್ಲೆಯ ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ಅರುಣ್‌ಕುಮಾರ್ (35) ಬಂಧಿತ ಆರೋಪಿಯಾಗಿದ್ದು, ಈತನಿಂದ 3 ಲಕ್ಷ ನಗದು, 32 ಎಟಿಎಂ (ATM) ಕಾರ್ಡ್‌ಗಳು ಹಾಗೂ ಬೈಕ್ (Bike) ಅನ್ನು ವಶಪಡಿಸಿಕೊಂಡಿದ್ದಾರೆ. ಹರಿಹರದ ಎಸ್‌ಬಿಐ ಎಟಿಎಂ ಬಳಿ ಹಿರಿಯ ನಾಗರಿಕರೊಬ್ಬರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಪಿನ್ ನಂಬರ್ ತಿಳಿದುಕೊಂಡು ಅದೇ ಮಾದರಿಯ ಎಟಿಎಂ ಕಾರ್ಡ್ ಅನ್ನು ಅವರಿಗೆ ನೀಡಿ ಬೇರೊಂದು ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡಿದ್ದ.
Advertisement
Advertisement
ಈ ಕುರಿತು ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಅರುಣ್‌ಕುಮಾರ್‌ನ ವಿರುದ್ಧ ಹರಿಹರ ನಗರ ಠಾಣೆಯಲ್ಲಿ 4, ಬಸವನಗರ ಠಾಣೆಯಲ್ಲಿ ಹಾಗೂ ಬಡಾವಣೆ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಇದನ್ನೂ ಓದಿ: ಗುರೂಜಿ ಹತ್ಯೆ ಪ್ರಕರಣ – ಹಂತಕರಿಂದ ಬೇನಾಮಿ ಆಸ್ತಿಯ ಮಾರಾಟದಲ್ಲಿ ಕೈ ಮುಖಂಡ ಭಾಗಿ
Advertisement
Advertisement
ಘಟನೆಗೆ ಸಂಬಂಧಿಸಿ ಎಸ್‌ಪಿ ಸಿ.ಬಿ.ರಿಷ್ಯಂತ್ ಮಾತನಾಡಿ, ಅಪರಿಚಿತರ ಬಳಿ ಎಟಿಎಂ ಕಾರ್ಡ್ ಹಾಗೂ ಪಾಸ್‌ವರ್ಡ್‌ಗಳನ್ನು ನೀಡಬಾರದು ಎಂದು ಮನವಿ ಮಾಡಿದರು. ಎಎಸ್‌ಪಿ ಕನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಸಿಪಿಐ ಸತೀಶ್‌ಕುಮಾರ್, ಪಿಎಸ್‌ಐಗಳಾದ ಚಿದಾನಂದಪ್ಪ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ದಾಳಿಯಲ್ಲಿ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನವರು ನಿಷ್ಪಪ್ರಯೋಜಕ, ಅಪ್ರಯೋಜಕ ಅಂತ ನಾವು ಹೇಳೋದಿಲ್ಲ: ಪ್ರಹ್ಲಾದ್ ಜೋಶಿ ಲೇವಡಿ