ಮುಂಬೈ: ಸಾರಿಗೆ ಬಸ್ ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಮುಂಬೈನ ಬೆಸ್ಟ್ ಬಸ್ (Brihanmumbai Electric Supply and Transport-BEST) ನಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಯುವಕನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಆರೋಪಿ ಯುವಕನನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಚೇಂಬೂರ್ ನಿವಾಸಿ ರಾಜೇಂದ್ರ ಪಾಟೀಲ್ ಬಂಧಿತ ಯುವಕ. ಶುಕ್ರವಾರ ಸಂಜೆ ಬಸ್ ನಲ್ಲಿ ಪ್ರಯಾಣಿಕರಿಂದ ಭರ್ತಿಯಾಗಿತ್ತು. ಮಹಿಳೆಯೊಬ್ಬರು ಬಸ್ ನ ಕೋಣೆಯೊಂದರಲ್ಲಿ ನಿಂತಾಗ ಹಿಂದಿನಿಂದ ಬಂದ ಯುವಕ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಬಸ್ ತುಂಬಿದ್ದರಿಂದ ಸಹಜವಾಗಿ ತಾಗಿದೆ ಆರಂಭದಲ್ಲಿ ಮಹಿಳೆ ಸುಮ್ಮನಾಗಿದ್ದರು. ಯುವಕ ಪದೇ ಪದೇ ಮಹಿಳೆ ಮೇಲೆ ಬೀಳೋದು, ಅಸಭ್ಯವಾಗಿ ದೇಹವನ್ನು ತಾಗಿಸೋದು ಮಾಡಿದ್ದಾನೆ.
Advertisement
Advertisement
ಯುವಕನ ವರ್ತನೆ ಕಂಡ ಮಹಿಳೆ ಹಿಂದೆ ತಿರುಗಿ ನೋಡಿದಾಗ ಆತನ ಪ್ಯಾಂಟ್ ಜಿಪ್ ತೆರೆದಿದೆ. ಕೂಡಲೇ ಮಹಿಳೆ ಆತನ ಕೆನ್ನೆಗೆ ಬಾರಿಸಿದ್ದಾರೆ. ಬಸ್ ನಲ್ಲಿದ್ದ ಇತರ ಸಹ ಪ್ರಯಾಣಿಕರಿಗೆ ಅಸಭ್ಯ ವರ್ತನೆ ಬಗ್ಗೆ ಹೇಳಿದ್ದಾರೆ. ಭಯಗೊಂಡ ರಾಜೇಂದ್ರ ತಕ್ಷಣ ಪ್ಯಾಂಟ್ ಜಿಪ್ ಹಾಕಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಪರಾರಿಯಾಗುತ್ತಿದ್ದ ರಾಜೇಂದ್ರನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.