ಬೆಂಗಳೂರು: ಗಣರಾಜ್ಯೋತ್ಸವ ದಿನ (Republic Day) ಬೆಂಗಳೂರಿನ ಹಲವೆಡೆ ಬಾಂಬ್ ಸ್ಫೋಟ (Bomb Blast) ಮಾಡಲಾಗುವುದು ಎಂದು ಪೊಲೀಸ್ ಕಂಟ್ರೋಲ್ ರೂಂಗೆ (Police Control Room) ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನ್ಸೂರ್ ಬಂಧಿತ ಆರೋಪಿ. ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಹೇಗೆ ಬಾಂಬ್ ಸ್ಫೋಟ ಮಾಡಲಾಗಿದೆಯೋ ಅದೇ ರೀತಿ ಬೆಂಗಳೂರು ನಗರದಾದ್ಯಂತ ನಾಡ ಬಾಂಬ್ ಸ್ಫೋಟಿಸಲು ಸಿದ್ದತೆ ನಡೆದಿದೆ ಎಂದು ಜ.9 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆ ಮಾಡಿ ತಿಳಿಸಿದ್ದ.
ಪ್ರಾಥಮಿಕ ತನಿಖೆಯಲ್ಲಿ ವ್ಯವಹಾರದಲ್ಲಿ ನಷ್ಟ ಆಗಿದ್ದಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ – ಸುರ್ಜೇವಾಲ
ಕರೆಯ ವೇಳೆ ಕೆ.ಆರ್. ಮಾರ್ಕೆಟ್‌ನ ಇಸ್ಮಾಯಿಲ್, ಬೊಮ್ಮನಹಳ್ಳಿ ಅಲ್ತಾಫ್, ಜೆಸಿನಗರದ ನಾಹೀದ್, ಹೆಚ್.ಬಿ.ಆರ್ ಲೇಔಟ್ ನ ಅಮ್ಜದ್, ನೀಲಸಂದ್ರದ ಹುಮಾಯೂನ್ ಹಾಗೂ ತಬ್ರೇಜ್ ಹೆಸರು ಹಾಗೂ ಮೊಬೈಲ್ ನಂಬರನ್ನು ಆರೋಪಿ ನೀಡಿದ್ದ.