ನೆಲಮಂಗಲ: ನಗರ ಪ್ರದೇಶದಿಂದ ಗ್ರಾಮಕ್ಕೂ ವ್ಯಾಪಿಸಿದ ಗಾಂಜಾ ಮಾರಾಟ, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಪ್ರವಾಸಿ ತಾಣವಾಗಿರುವ ಶಿವಗಂಗೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಬನಶಂಕರಿ ಮೂಲದ ವ್ಯಕ್ತಿ ಮಧು ಬಂಧಿತ ಆರೋಪಿ. ಆರೋಪಿ ಮಧುವಿನಿಂದ ಪೊಲೀಸರು ಸುಮಾರು 1 ಕೆಜಿಗೂ ಅಧಿಕ ಗಾಂಜಾ ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ವಯಸ್ಕರು ಮತ್ತು ಗಾಂಜಾ ಚಟುವಟಿಕೆಯನ್ನು ಗಮನಿಸಿ ಆರೋಪಿಯನ್ನ ಗ್ರಾಮಸ್ಥರ ನೆರವಿನಿಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ
ಸ್ಥಳಕ್ಕೆ ಡಿವೈಎಸ್‍ಪಿ ಗೌತಮ್ ಹಾಗೂ ಪಿಎಸ್‍ಐ ಮುರುಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.