ಮುಂಬೈ: ಅಪ್ರಾಪ್ತ ಬಾಲಕಿಯ (Girl) ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿತನಾಗಿದ್ದ (Arrest) ಯುವಕನೋರ್ವ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿ (Jail) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕರಣ್ ಪ್ರಮೋದ್ ಸೆರಿಯನ್ (19) ಮೃತ ಆರೋಪಿ. ಕರಣ್ ವಿರುದ್ಧ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆತ ಸೆ. 26ರಿಂದ ಜೈಲಿನಲ್ಲಿದ್ದ. ಆದರೆ ಆತ ಬ್ಯಾರಕ್‍ನಲ್ಲಿ ತನ್ನ ಪ್ಯಾಂಟ್ ಬಳಸಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಇದನ್ನು ಗಮನಿಸಿದ ಇತರ ಕೈದಿಗಳು ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜೈಲು ಅಧಿಕಾರಿಗಳು ಕೂಡಲೇ ಕರಣ್‍ಪ್ರಮೋದ್‍ನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಕರಣ್ ಪ್ರಮೋದ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯೇನು?: ಕರಣ್ ಪ್ರಮೋದ್ ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದ 16 ವರ್ಷದ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರು ಓಡಿ ಹೋಗಿ ಥಾಣೆಯ ಮುಂಬ್ರಾದಲ್ಲಿ ಇಬ್ಬರು ವಾಸಿಸುತ್ತಿದ್ದರು. ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಕರಣ್ ಪ್ರಮೋದ್ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಹ್ಲಾದ್ ಜೋಶಿ ಮಾಹಿತಿ
ಆದರೆ ಬಾಲಕಿಯ ಪೋಷಕರು ಇದನ್ನು ವಿರೋಧಿಸಿ ಕರಣ್ ಪ್ರಮೋದ್ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಇದರಿಂದ ಮನನೊಂದು ಕರಣ್ ಪ್ರಮೋದ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ದಲಿತರಲ್ಲಿ ಒಗ್ಗಟ್ಟು ಮೂಡಬಾರದು ಅನ್ನೋ ಭಾವನೆ ಬಿಜೆಪಿಯದ್ದು: ಧರ್ಮಸೇನಾ ಕಿಡಿ