ಬೆಂಗಳೂರು: ಜಾತಿಗಣತಿಗೆ (Caste Census) ಹೋದ ಶಿಕ್ಷಕಿಯನ್ನೇ (Teacher) ವ್ಯಕ್ತಿಯೊಬ್ಬ ಕೂಡಿ ಹಾಕಿದ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೋತಿ ಹೊಸಹಳ್ಳಿಯಲ್ಲಿ ನಡೆದಿದೆ.
ಬುಧವಾರ ಸಂಜೆ ಶಿಕ್ಷಕಿ ಸುಶೀಲಮ್ಮ ಅವರು ಸಂದೀಪ್ ಅವರ ಮನೆಗೆ ಆಗಮಿಸಿ, ನಾವು ಗಣತಿಗೆ ಬಂದಿದ್ದೇವೆ. ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದರು. ಇದಕ್ಕೆ ಮನೆಯಲ್ಲಿದ್ದವರು, ನೀವು ಯಾವ ಕಂಪನಿಯವರು ಇಲ್ಲಿಗೆ ಏಕೆ ಬಂದಿದ್ದೀರಾ? ನೀವು ನಿಜವಾಗಿಯೂ ಟೀಚರ್ ಅಲ್ಲ ಎಂದು ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ದೈವಸ್ಥಾನದ ಮೆಟ್ಟಿಲೇರಿದ ಕಾಂತಾರ ಚಿತ್ರ – ದೈವಾರಾಧನೆ ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು
ಕೊನೆಗೆ ಶಿಕ್ಷಕಿ ತಾಯಿಯ ಬಳಿಕ ಆಧಾರ್‌ಕಾರ್ಡ್, ವೋಟರ್ ಕಾರ್ಡ್ ನಂಬರ್ ಪಡೆದಿದ್ದರು. ಈ ಹೊತ್ತಿಗೆ ಟೀ ಶಾಪ್ ನಡೆಸುವ ಸಂದೀಪ್ ಮನೆಗೆ ಬಂದಿದ್ದಾನೆ. ಬಂದವನೇ ಜಗಳ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಇದನ್ನೂ ಓದಿ: ಕತಾರ್ ಏರ್‌ವೇಸ್ ವಿಮಾನದಲ್ಲಿ ಸಸ್ಯಾಹಾರಿಗೆ ಮಾಂಸಾಹಾರ ನೀಡಿ ಯಡವಟ್ಟು – ಉಸಿರುಗಟ್ಟಿ ಪ್ರಯಾಣಿಕ ಸಾವು
ಕರೆಯ ಬೆನ್ನಲ್ಲೇ ಸಂದೀಪ್ ಮನೆಗೆ ತೆರಳಿ ಸುಶೀಲಮ್ಮ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸಂದೀಪ್ ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.