ಮುಂಬೈ: ಎಂಟು ತಿಂಗಳ ತುಂಬು ಗರ್ಭಿಣಿಯನ್ನು ಕೊಂದ ಆರೋಪದಡಿ 22 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಬುಧವಾರ ನಗರ ಕುರ್ಲಾ ಪ್ರದೇಶದ ನಿವಾಸವೊಂದರಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಕೋಮಲ್ ಸಂಜಯ್ ಸೋಂಕರ್ ಎಂದು ಗುರುತಿಸಲಾಗಿದೆ. ಮಹಿಳೆಯ ಜೊತೆಗೆ ಭ್ರೂಣವು ಸಹ ಆಕೆಯ ಗರ್ಭದಲ್ಲಿಯೇ ಸಾವನ್ನಪ್ಪಿದೆ. ಇದನ್ನೂ ಓದಿ: ಸೂರ್ಯನ ಕೆಂಗಣ್ಣು – ದೆಹಲಿಯಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು
ಆರೋಪಿ ಅರ್ಜುನ್ ಸೋಂಕರ್ ಮೃತ ಮಹಿಳೆಯ ಪತಿ ಸಂಜಯ್ ಅವರ ಸೋದರ ಸಂಬಂಧಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರೊಂದಿಗೆ ವಾಸವಾಗಿದ್ದ. ಇದೀಗ ಆರೋಪಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸರು ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಮತ್ತು 316(ತಪ್ಪಿತಸ್ಥನು ನರಹತ್ಯೆಯ ಕೃತ್ಯದ ಮೂಲಕ ಹುಟ್ಟಲಿರುವ ಮಗುವಿನ ಅಥವಾ ಭ್ರೂಣ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಈ ಕೊಲೆಗೆ ನಿಖರವಾದ ಕಾರಣ ಏನು ಎಂಬುವುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂಭಾಗದಲ್ಲೇ ಏರ್ ಫೈರ್ – ವೆಬ್ ಡಿಸೈನರ್ ಕಿಡ್ನಾಪ್