ಬೆಂಗಳೂರು: ಹೈ ಎಂಡ್ ಕಾರುಗಳನ್ನ ಖರೀದಿ ನೆಪದಲ್ಲಿ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸ (Cubbon Park Police Station) ರು ಬಂಧಿಸಿದ್ದಾರೆ.
ಬಂಧಿತನನ್ನು ಸೈಯಾದ್ ಜಿಮ್ರಾನ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 10 ಕೋಟಿ ಮೌಲ್ಯದ 9 ಹೈ ಎಂಡ್ ಕಾರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕಾರುಗಳನ್ನ ಒಳ್ಳೆಯ ಬೆಲೆಗೆ ಮಾರಾಟ ಮಾಡುವುದಾಗಿ ಹೇಳುತ್ತಿದ್ದನು. ಉದ್ಯಮಿಗಳು, ವ್ಯಾಪಾರಸ್ಥರ ಬಳಿ ಕಾರುಗಳನ್ನು ಪಡೆದು ವಂಚನೆ ಮಾಡುತ್ತಿದ್ದನು. ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ ರೋವರ್, ಇನೋವಾ ಸೇರಿ ದುಬಾರಿ ಬೆಲೆಯ ಕಾರುಗಳನ್ನ ಪಡೆದು ವಂಚಿಸುತ್ತಿದ್ದನು. ಇದನ್ನೂ ಓದಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್ ಆಸ್ಪತ್ರೆಗೆ ದಾಖಲು
ಉದ್ಯಮಿ ರಾಜು ಎಂಬಾತನ ರೇಂಜ್ ರೋವರ್ (Range Rover) 18 ಲಕ್ಷಕ್ಕೆ ಖರೀದಿ ಮಾಡಿ ನಂತರ ಉಳಿದ ಹಣ ನೀಡದೆ ಆರೋಪಿ ಸತಾಯಿಸುತ್ತಿದ್ದ. ಅಲ್ಲದೆ ಹಣ (Money) ನೀಡುವಂತೆ ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಉದ್ಯಮಿ ರಾಜು ದೂರು ನೀಡಿದ್ದರು. ಇದೀಗ ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯ್ಯದ್ ಜಿಬ್ರಾನ್‍ನನ್ನು ಬಂಧಿಸಿದ್ದಾರೆ.