ಬ್ಯಾಗ್‍ನಲ್ಲಿ ಏನಿದೆ ಎಂದಿದ್ದಕ್ಕೆ ಬಾಂಬ್ ಇದೆ ಎಂದ ವೃದ್ಧ ಅರೆಸ್ಟ್

Advertisements

ತಿರುವನಂತಪುರಂ: ಬ್ಯಾಗ್‍ನಲ್ಲಿದೆ ಎಂದು ಸಿಬ್ಬಂದಿ ಕೇಳಿದ್ದ ಪ್ರಶ್ನೆಗೆ ಬಾಂಬ್ ಇದೆ ಎಂದು ಉಡಾಫೆಯಾಗಿ ಉತ್ತರಿಸಿದ್ದ ವೃದ್ಧನನ್ನು ಬಂಧಿಸಿದ ಘಟನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಪತ್ತನಂತಿಟ್ಟ ಮೂಲದ ಮಮ್ಮನ್ ಜೋಸೆಫ್(63) ಬಂಧಿತ ಆರೋಪಿ. ಎಮಿರೇಟ್ಸ್ ವಿಮಾನದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲು ಜೋಸೆಫ್ ಪತ್ನಿಯೊಂದಿಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮಮ್ಮನ್ ಜೋಸೆಫ್‍ಗೆ ಭದ್ರತಾ ತಪಾಸಣೆ ವೇಳೆ ಸಿಬ್ಬಂದಿ ಬ್ಯಾಗ್‍ನಲ್ಲಿ ಏನಿದೆ ಎಂದು ಪದೇ ಪದೇ ಪ್ರಶ್ನಿಸಿದ್ದಾರೆ. ಈ ರೀತಿ ಪ್ರಶ್ನಿಸಿರುವುದು ಜೋಸೆಫ್‍ಗೆ ಇಷ್ಟವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜೋಸೆಫ್ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಉಡಾಫೆ ಉತ್ತರ ನೀಡಿದ್ದಾನೆ.

Advertisements

ಈ ರೀತಿ ಉತ್ತರ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ ಹಾಗೂ ಆತನ ಪತ್ನಿಯನ್ನು ತಪಾಸಣೆ ನಡೆಸಿ, ಜೋಸೆಫ್‍ನನ್ನು ಬಂಧಿಸಿದ್ದಾರೆ. ಜೊತೆಗೆ ವಿಮಾನ ಪ್ರವೇಶಕ್ಕೂ ನಿರಾಕರಿಸಿದ್ದಾರೆ. ಇದನ್ನೂ ಓದಿ: ಬನಶಂಕರಿ ದೇಗುಲದಲ್ಲಿ ಕಲಹ – ಮುಜರಾಯಿ ಆಯುಕ್ತರಿಗೆ ಅರ್ಚಕರ ವಿರುದ್ಧವೇ ದೂರು

ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಜೋಸೆಫ್ ಬ್ಯಾಗ್ ಪರಿಶೀಲಿಸಲಾಗಿತ್ತಾದರೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧಿಸಿ ನೆಡುಂಬಶ್ಶೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮರವಂತೆ ಸಮುದ್ರಕ್ಕೆ ಉರುಳಿದ ಕಾರು- ಓರ್ವ ಸಾವು, ಇನ್ನೋರ್ವನಿಗಾಗಿ ಹುಡುಕಾಟ

Live Tv

Advertisements
Advertisements
Exit mobile version