ಮುಂಬೈ: ಯುವಕನೊಬ್ಬ ಮನುಷ್ಯತ್ವ ಮರೆತು ಮಂಗವೊಂದರ ಮೇಲೆ ಮೃಗೀಯವಾಗಿ ವರ್ತಿಸಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯುವಕ ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದಿದ್ದಾನೆ. ಸಾಲದ್ದಕ್ಕೆ ಕೆಳಗಿಸಿ ಅಮಾನುಷವಾಗಿ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾನೆ.
ಈ ಘಟನೆ ಡಿಸೆಂಬರ್ 16 ರಂದು ರಿಸೋದ್ ತೆಹ್ಸಿಲ್ ನ ಗ್ರಾಮ್‍ಕುರ ಗ್ರಾಮದಲ್ಲಿ ನಡೆದಿದೆ. ಸೋಮವಾರ ಕೋತಿಯನ್ನ ಹಲ್ಲೆ ಮಾಡಿ ಕೊಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಅಮಾನುಷವಾಗಿ ಮರಕ್ಕೆ ಕಟ್ಟಿ ಕೋತಿಯನ್ನು ಹೊಡೆದು ಕೊಂದ 23 ವರ್ಷದ ಯುವಕ ಸೇರಿದಂತೆ ಇಬ್ಬರು ಅಪ್ರಾಪ್ತರನ್ನು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನ ಪವನ್ ಬಂಗಾರ್ ಎಂದು ಗುರುತಿಸಲಾಗಿದ್ದು, ಸ್ನೇಹಿತನ ಜೊತೆ ಸೇರಿ ಕೋತಿಯನ್ನ ಸಾಯುವಂತೆ ಹೊಡೆದಿದ್ದಾನೆ. ಇವರ ಮತ್ತೊಬ್ಬ ಸ್ನೇಹಿತ ಈ ಘಟನೆಯನ್ನ ಮೊಬೈಲ್ ಫೋನ್‍ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಆರೋಪಿ ಬಂಗಾರ್ ತೋಟದಲ್ಲಿ ಕೋತಿ ಮೇಲೆ ಹಲ್ಲೆ ಮಾಡಲಾಗಿದೆ.
ತೋಟಕ್ಕೆ ಬಂದಿದ್ದ ಕೋತಿಯನ್ನ ಮರಕ್ಕೆ ಹಗ್ಗದಿಂದ ಉಲ್ಟ ನೇತು ಹಾಕಿ ಮನಬಂದಂತೆ ಹೊಡೆದಿರೋದನ್ನ ವಿಡಿಯೋದಲ್ಲಿ ನೋಡಬಹುದು. ನಂತರ ಕೋತಿಯನ್ನ ಕೆಳಗಿಳಿಸಿ ಕೋಲಿನಿಂದ ಹೊಡೆದಿದ್ದಾರೆ. ಕೋತಿ ಏಟನ್ನ ಸಹಿಸಲಾಗದೇ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದೆ. ಬಳಿಕ ಯುವಕರು ಆ ವಿಡಿಯೋವನ್ನು ವಾಟ್ಸಪ್ ಮೂಲಕ ಹಂಚಿದ್ದಾರೆ. ನಂತರ ಅರಣ್ಯ ಅಧಿಕಾರಿಗಳು ಈ ವಿಡಿಯೋವನ್ನ ಗಮಿನಿಸಿದ್ದು, ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ.
ಅರಣ್ಯ ಅಧಿಕಾರಿಗಳು ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9ರಡಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನ ಸ್ಥಳಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇನ್ನು ಇಬ್ಬರು ಅಪ್ರಾಪ್ತರನ್ನು ಜುವಿನೈಲ್ ಜಸ್ಟಿಸ್ ಹೋಮ್‍ಗೆ ಕಳಿಸಲಾಗಿದೆ.
https://www.youtube.com/watch?v=og0eNEypKKk