– ಒಂದು ಮಾತ್ರೆಯ ಬೆಲೆ 900 ರೂ.
– ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್
ಬೆಂಗಳೂರು: 10 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳ ಮಾತ್ರೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಜಹಾಂಗೀರ್ ಬಂಧಿತ ಆರೋಪಿ. ನಗರದ ಪರಪ್ಪನ ಅಗ್ರಹಾರ ಬಳಿಯ ಈರಪ್ಪ ಲೇಔಟ್‍ನಲ್ಲಿ ಆರೋಪಿಯನ್ನು ಬಂಧಿಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಜಹಾಂಗೀರ್ ನಿಷೇಧಿತ ಮಾತ್ರೆಗಳಾದ ಯಾಬಾ, ಮೆಥಾ ಹಾಗೂ ಅಂಫಟಮೈನ್ ಹೆಸರಿನ ಮಾತ್ರೆಗಳನ್ನು ಮುಂಬೈನಿಂದ ಬೆಂಗಳೂರಿಗೆ ತರುತ್ತಿದ್ದ. ಬಳಿಕ ಒಂದು ಮಾತ್ರೆಗೆ 900 ರೂ. ನಂತೆ ಮಾರಾಟ ಮಾಡುತ್ತಿದ್ದ. ಕಾಲೇಜು ವಿದ್ಯಾರ್ಥಿಗಳನ್ನೇ ಆರೋಪಿ ಟಾರ್ಗೆಟ್ ಮಾಡಿಕೊಂಡಿದ್ದನು. ಒಂದು ಮಾತ್ರೆಯನ್ನು ತಗೆದುಕೊಂಡರೆ ಇಡೀ ದಿನ ಮತ್ತಿನಲ್ಲಿ ಇರುತ್ತಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ನಿಷೇಧಿತ ಮಾತ್ರೆಗಳಾದ ಯಾಬಾ, ಮೆಥಾ ಹಾಗೂ ಅಂಫಟಮೈನ್ ಹೆಸರಿನ ಒಟ್ಟು 1,000 ಸಾವಿರ ಮಾತ್ರೆಗಳು ಆರೋಪಿಯ ಬಳಿ ಸಿಕ್ಕಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಹಾಂಗೀರ್ ಹಿಂದೆ ದೊಡ್ಡ ತಂಡವೇ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.