ಬೆಂಗಳೂರು: ಕೆಲ ದಿನಗಳ ಹಿಂದೆ ಬೆಳಗ್ಗಿನ ಜಾವ ಮಹದೇವಪುರದ ದೊಡ್ಡಕನ್ನಲ್ಲಿಯ ಮನೆಯೊಂದರಲ್ಲಿ ಬಂಗಾರ ಹಾಗೂ ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ವೊಂದನ್ನು ಇದೀಗ ವೈಟ್ ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
Advertisement
ಕೋಲಾರ ಮೂಲದ ಸಂತೋಷ ಅಲಿಯಾಸ್ ಸಂತು, ಹಾಸನ ಮೂಲದ ಮೋಹನ್ ಅಲಿಯಾಸ್ ಮನು, ಸಾವಿತ್ರಿ ಹಾಗೂ ರೇಣುಕಾ ಬಂಧಿತ ಆರೋಪಿಗಳು. ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿ ಕಳ್ಳತನಕ್ಕೆ ಮುಂದಾಗುತ್ತಿದ್ದರು. ಆರೋಪಿಗಳು ಸುಮಾರು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 25 ಲಕ್ಷ ಬೆಲೆ ಬಾಳುವ 510 ಗ್ರಾಂ ಚಿನ್ನ ಹಾಗೂ 500 ಗ್ರಾಂ ತೂಕದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹೇಂದ್ರ ಕುಮಾರ್, ಸಬ್ ಇನ್ಸ್ ಪೆಕ್ಟರ್ ಪರಶುರಾಮ, ಹಾಗೂ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಎಸ್. ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ದ್ವಿತೀಯ PUC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
Advertisement
Advertisement
ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ:
ಕೋಲಾರ ಮೂಲದ ಸಂತೋಷ್‍ಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಗೆ ಬಡತನದ ಅರಿವಾಗದಂತೆ ನೋಡಿಕೊಳ್ಳಲು ಸಂತೋಷ್ ಕಳ್ಳತನಕ್ಕೆ ಇಳಿದಿದ್ದಾನೆ. ಮಕ್ಕಳ ಐಷಾರಾಮಿ ಜೀವನಕ್ಕೆ ಮನೆಗಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ರಾತ್ರಿ ಊಟ ಮುಗಿಸಿಕೊಂಡು ಏರಿಯಾದಲ್ಲಿ ಬೀಟ್ ಹಾಕುತ್ತಿದ್ದ ಆರೋಪಿ, ರಾತ್ರಿ 9 ಗಂಟೆಗೆ ಯಾವ ಮನೆಯಲ್ಲಿ ಲೈಟ್ ಆಫ್ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದ. ಬಳಿಕ ಮನೆಯಲ್ಲಿ ಯಾರು ಇಲ್ಲದಿರೋದನ್ನ ಮನಗಂಡು ಕಳ್ಳತನ ಮಾಡುತ್ತಿದ್ದನು.
Advertisement
ಬೆಳಗ್ಗಿನ ಜಾವ ಪೊಲೀಸ್ ಬೀಟ್ ಮುಗಿಯೋದನ್ನ ಕಾಯುತ್ತಿದ್ದ. ಪೊಲೀಸರ ಬೀಟ್ ಬಳಿಕ ಮನೆಯಿಂದ ಮಾಲ್ ಜೊತೆಗೆ ಎಸ್ಕೇಪ್ ಆಗುತ್ತಿದ್ದನು. ಕದ್ದ ವಸ್ತುಗಳನ್ನ ತನ್ನ ಸಂಬಂಧಿಗಳಿಗೆ ನೀಡುತ್ತಿದ್ದನು. ಅಲ್ಲದೆ ಮೋಹನ್ ಹಾಗೂ ಸಾವಿತ್ರಿ ಮೂಲಕ ಮಾರಾಟ ಮಾಡಿಸುತ್ತಿದ್ದನು. ಬಳಿಕ ಬಂದ ಹಣದಲ್ಲಿ ಮಕ್ಕಳಿಗೆ ಐಷಾರಾಮಿ ಜೀವನದ ಬದುಕು ತೋರಿಸುತ್ತಿದ್ದನು.