– ಆರೋಪಿಯ ಮತ್ತೊಂದು ಪ್ರಕರಣ ಬೆಳಕಿಗೆ
ಬೆಂಗಳೂರು: ಮೈಸೂರಿಗೆ ಟ್ರಿಪ್ ಹೋಗಬೇಕು ಅಂತ ಕರೆದೊಯ್ದು ಇನ್ನೋವಾ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಯನ್ನ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಕರಣ್ ಕುಮಾರ್(27) ಬಂಧಿತ ಆರೋಪಿ. ಜಸ್ಟ್ ಡಯಲ್ ಮೂಲಕ ಸೌಮ್ಯ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಪರ್ಕಿಸಿದ್ದ ಆರೋಪಿ, ಮೈಸೂರಿಗೆ ಟ್ರಿಪ್ ಹೋಗಬೇಕು ಅಂತ ಇನ್ನೋವಾ ಕಾರು ಬುಕ್ ಮಾಡಿ ಪಡೆದುಕೊಂಡಿದ್ದನು.
Advertisement
ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬರುತ್ತಿದ್ದಂತೆಯೇ ಡ್ರೈವರ್ ಅರುಣ್ ಕುಮಾರ್ ಗೆ ಕಾರು ನಿಲ್ಲಿಸುವಂತೆ ಕರನ್ ತಿಳಿಸಿದ್ದನು. ನಂತರ ಮಿಸ್ ಚೀಫ್ ಹೋಟೆಲ್ ರೂಂ ನಂಬರ್ 105ರಲ್ಲಿ ನನ್ನ ಸ್ನೇಹಿತ ಇದ್ದಾನೆ. 10 ಸಾವಿರ ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಡ್ರೈವರ್ ಬಳಿ ಅಂದಿದ್ದನು.
Advertisement
Advertisement
ಡ್ರೈವರ್ ಅರುಣ್ ಕುಮಾರ್ ಕಾರಿನಿಂದ ಕೆಳಗಿಳಿದು, ಕೀ ತೆಗೆದುಕೊಂಡು ಹೊರಡಲು ಮುಂದಾದಾಗ ಕರಣ್, ಎಸಿ ಹಾಕಿ ಹೋಗು ಎಂದಿದ್ದನು. ಅಂತೆಯೇ ಡ್ರೈವರ್ ಎಸಿ ಆನ್ ಮಾಡಿ ರೂಂ ಕಡೆ ಹೊರಟಿದ್ದನು. ಈ ವೇಳೆ 22 ಲಕ್ಷ ಮೌಲ್ಯದ ಇನ್ನೋವಾ ಕಾರಿನೊಂದಿಗೆ ಕರಣ್ ಎಸ್ಕೇಪ್ ಆಗಿದ್ದನು. ಇದನ್ನೂ ಓದಿ: ಪ್ರವಾಸಕ್ಕೆಂದು ಕಾರು ಬುಕ್ ಮಾಡಿ ಕ್ಷಣಾರ್ಧದಲ್ಲೇ ಕಳವುಗೈದ!
Advertisement
ವಾಪಸ್ ಅರುಣ್ ಬಂದು ನೋಡಿದಾಗ ಕಾರು ಕಳವಾಗಿತ್ತು. ಅದೇ ದಿನ ಆರೋಪಿ ಮತ್ತೊಂದು ಸ್ವಿಫ್ಟ್ ಡಿಸೈರ್ ಬುಕ್ ಮಾಡಿದ್ದನು. ಗಾಡಿ ನಿಲ್ಲಿಸು ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಕರಣ್ ಡ್ರೈವರ್ ಗೆ ಹೇಳಿದ್ದನು. ಆಗ ಡ್ರೈವರ್ ನಾನೂ ಮಾಡಬೇಕು ಅಂದಿದ್ದಾನೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕರಣ್, ಡ್ರೈವರ್ ಮೂತ್ರ ಮಾಡಿ ಬರವಷ್ಟರಲ್ಲಿ ಸ್ವಿಫ್ಟ್ ಡಿಸೈರ್ ಕಾರಿನೊಂದಿಗೆ ಪರಾರಿಯಾಗಿದ್ದನು.
ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಇನ್ನೋವಾ ಕ್ರಿಸ್ಟ ಮತ್ತು ಸ್ವಿಫ್ಟ್ ಡಿಸೈರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.