ಬೆಂಗಳೂರು: ಇಂದಿರಾನಗರದ (Indiranagara) ಹೋಟೆಲ್ ಒಂದರಲ್ಲಿ ಪ್ರೇಯಸಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು (Police) ದೇವನಹಳ್ಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆಯಲಾದ ಆರೋಪಿಯನ್ನು ಆರವ್ ಹನೋಯ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಪ್ರೇಯಸಿ ಮಾಯ ಗೊಗಾಯ್ ಎಂಬಾಕೆಯನ್ನು ಹತ್ಯೆಗೈದಿದ್ದ. ಆತನ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು.
Advertisement
ಪ್ರೇಯಸಿಯನ್ನು ಹತ್ಯೆಗೈಯ್ಯಲು ಆರೋಪಿ ಹಗ್ಗ ಹಾಗೂ ಚಾಕುವನ್ನು ಆರ್ಡರ್ ಮಾಡಿ ಹೊಟೆಲ್ಗೆ ತರಿಸಿಕೊಂಡಿದ್ದ. ಆತ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು, ಖಾಸಗಿ ಕಂಪನಿಯಲ್ಲಿ ಇಂಟರ್ನ್ಶೀಪ್ ಮಾಡುತ್ತಿದ್ದ. ಇಬ್ಬರೂ ಆಪ್ ಮೂಲಕ ಪರಿಚಯ ಆಗಿದ್ದರು ಎಂದು ತಿಳಿದು ಬಂದಿದೆ.
Advertisement
ಕೊಲೆ ಬಳಿಕ ಆರೋಪಿ ಶವದ ಬಳಿ ಎರಡು ದಿನಗಳ ಕಾಲ ಇದ್ದ, ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಆರೋಪಿ ಹೋಟೆಲ್ನಲ್ಲೇ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೂ ಹೋಗಿದ್ದ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಅಲ್ಲಿಂದ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ವಾರಣಾಸಿಗೆ ಹೋಗಿದ್ದ. ಅಲ್ಲಿಂದ ಕೊನೆಗೆ ದೇವನಹಳ್ಳಿಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಕೊಲೆಯಾದ ಮಾಯಳ ಅಕ್ಕ ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದಾರೆ. ಶುಕ್ರವಾರ ಅಕ್ಕನಿಗೆ ಕರೆ ಮಾಡಿ, ‘ಆಫೀಸ್ ಪಾರ್ಟಿ ಇದೆ. ರಾತ್ರಿ ಬರಲ್ಲ’ ಎಂದು ಮಾಯ ಹೇಳಿದ್ದಳು. ಇನ್ನೂ ಹಂತಕ ಆರವ್ ಹಾಗೂ ಮಾಯ 6 ತಿಂಗಳಿಂದ ಪ್ರೀತಿಯಲ್ಲಿದ್ದರು ಎಂಬುದು ಮಾಯ ಸಹೋದರಿಯಿಂದ ತಿಳಿದುಬಂದಿತ್ತು.
ಆರೋಪಿ ಪ್ರೇಯಸಿ ಜೊತೆ ಎರಡು ದಿನಗಳ ಕಾಲ ಕಳೆದು ಪ್ರೀ ಪ್ಲಾನ್ನಂತೆ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿತ್ತು.