ನವದೆಹಲಿ: ಯುಎಇ ರಾಜಮನೆತನದ (UAE Royal Family) ಕಚೇರಿ ಉದ್ಯೋಗಿ ಎಂದು ಹೇಳ್ಕೊಂಡು ದೆಹಲಿಯ ಲೀಲಾ ಪ್ಯಾಲೇಸ್ಗೆ (Leela Hotel) 23 ಲಕ್ಷ ವಂಚಿಸಿದ್ದ ಖತರ್ನಾಕ್ ವ್ಯಕ್ತಿಯನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
ದೆಹಲಿ ಪೊಲೀಸರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರಿನ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಧರ್ಮ, ಜಾತಿ ಆಧಾರದ ಮೇಲೆ ವೋಟ್ ಕೇಳಲ್ಲ – ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಪ್ರಚಾರ: HDK
Advertisement
Advertisement
ಈತ ಲೀಲಾ ಪ್ಯಾಲೇಸ್ನಲ್ಲಿ ನಕಲಿ ದಾಖಲೆ ಸಲ್ಲಿಸಿ ಆಗಸ್ಟ್ 1 ರಿಂದ ನವೆಂಬರ್ 20ರ ವರೆಗೆ ತಂಗಿದ್ದ. ನಂತರ 23 ಲಕ್ಷ ಬಿಲ್ ಕಟ್ಟದೇ ಸದ್ದಿಲ್ಲದೇ ಎಸ್ಕೇಪ್ ಆಗಿದ್ದ. ಈ ಬಗ್ಗೆ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜರ್ ದೂರು ನೀಡಿದ್ದರು. ಇದನ್ನೂ ಓದಿ: ಸುಮ್ಮನಿರದಿದ್ದರೇ ಸಿದ್ಧವನದಲ್ಲಿ ನಡೆಸಿದ ಷಡ್ಯಂತ್ರ ಬಿಚ್ಚಿಡುತ್ತೇನೆ – ಸಿದ್ದುಗೆ HDK ಎಚ್ಚರಿಕೆ
Advertisement
ದೂರಿನಲ್ಲಿ, ಮಹಮ್ಮದ್ ಶರೀಫ್ ತನ್ನನ್ನು ತಾನು ಯುಎಇ ಸುಲ್ತಾನ್ ಶೇಖ್ ಫಲ್ಹಾ ಬಿನ್ ಜಾಯೇದ್ ಅಲ್ ನಹ್ಯಾನ್ ಕಚೇರಿಯ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಎಂಬುದು ತಿಳಿದುಬಂದಿದೆ.
Advertisement
ದೂರಿನ ಅನ್ವಯ ಆರೋಪಿ ವಿರುದ್ಧ ಐಪಿಸಿ (IPC) ಸೆಕ್ಷನ್ 149, 420 ಹಾಗೂ 380ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನ ಬಂಧಿಸಲಾಯಿತು. ನಂತರ ದೆಹಲಿ ನ್ಯಾಯಾಲಯದ (Delhi Court) ಎದುರು ಹಾಜರುಪಡಿಸಲಾಯಿತು. ವಾದ-ವಿವಾದಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಆರೋಪಿಯನ್ನ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k