Connect with us

ಹೆಂಡ್ತಿಯನ್ನ ಆಫೀಸ್‍ನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡ್ದ

ಹೆಂಡ್ತಿಯನ್ನ ಆಫೀಸ್‍ನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡ್ದ

ಖಮ್ಮಮ್: ಪತಿರಾಯನೇ ತನ್ನ ಹೆಂಡತಿಯನ್ನ ಕೆಲಸ ಮಾಡೋ ಜಾಗದಿಂದ ಕಿಡ್ನಾಪ್ ಮಾಡಿ ಬಳಿಕ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ಗುರುವಾರದಂದು ನಡೆದಿದೆ.

ಬಂಢಾರಿ ಪದ್ಮಾ ಕೊಲೆಯಾದ ಮಹಿಳೆ. ಇವರು ಜಿಲ್ಲಾ ಪರಿಷತ್ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪದ್ಮಾ ಹಾಗೂ ಅವರ ಪತಿಯ ನಡುವೆ ಮನಸ್ತಾಪವಿತ್ತು. ಹೀಗಾಗಿ ಕೆಲ ಸಮಯದಿಂದ ಪದ್ಮಾ ತನ್ನ ಪತಿಯಿಂದ ದೂರವಾಗಿದ್ದರು ಎಂದು ವರದಿಯಾಗಿದೆ.

ಗುರುವಾರ ಸಂಜೆ ಪದ್ಮಾ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಆಕೆಯ ಪತಿ ಪ್ರಭಾಕರ್ ಇಬ್ಬರು ವ್ಯಕ್ತಿಗಳೊಂದಿಗೆ ಕಾರ್‍ನಲ್ಲಿ ಬಂದು ಪದ್ಮಾರನ್ನು ಕಿಡ್ನಾಪ್ ಮಾಡಿ ಇಲ್ಲೆಂಡು ಎಂಬಲ್ಲಿಗೆ ಕರೆದೊಯ್ದಿದ್ದಾರೆ. ಅಲ್ಲಿ ಪದ್ಮಾ ಅವರ ಕುತ್ತಿಗೆಯನ್ನ ದಾವಣಿಯಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನ ಹೊರವಲಯದಲ್ಲಿ ಎಸೆದಿದ್ದಾರೆ.

ಪೊಲೀಸರು ಶವವನ್ನ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪ್ರಭಾಕರ್ ಸದ್ಯ ಪರಾರಿಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ.

Advertisement
Advertisement