ಹೃದಯಾಘಾತದಿಂದ 25ರ ವಿವಾಹಿತ ಸಾವು – ಪತಿ ಸಾವಿನ ಶಾಕ್‌ನಿಂದ ಪತ್ನಿ ಆತ್ಮಹತ್ಯೆ

Public TV
2 Min Read
newly wed couple delhi zoo

– 24 ಗಂಟೆ ಅವಧಿಯಲ್ಲಿ ನವಜೋಡಿ ದುರಂತ ಅಂತ್ಯ!

ನವದೆಹಲಿ: ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದ ಗಾಜಿಯಾಬಾದ್‌ನ ನವಜೋಡಿಯೊಂದು ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ. ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟರೆ, ಪತಿಯ ಸಾವಿನಿಂದ ಆಘಾತಗೊಂಡು ಪತ್ನಿ ಕೂಡ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾಳೆ.

25 ರ ಹರೆಯದ ಅಭಿಷೇಕ್‌ ಅಹ್ಲುವಾಲಿ ಹೃದಯಾಘಾತದಿಂದ ಮೃತಪಟ್ಟ. ಇದಾದ 24 ಗಂಟೆಗಳ ಬಳಿಕ ಪತಿ ಸಾವಿನ ಆಘಾತದಿಂದ ಅಂಜಲಿ, ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತೇಜಸ್ವಿ ಯಾದವ್ ಬೆಂಗಾವಲು ಪಡೆಯ ವಾಹನ ಅಪಘಾತ- ಚಾಲಕ ದುರ್ಮರಣ

HEART ATTACK

ಕಳೆದ ವರ್ಷದ ನವೆಂಬರ್‌ 30 ರಂದು ಅಭಿಷೇಕ್ ಮತ್ತು ಅಂಜಲಿ ವಿವಾಹವಾಗಿದ್ದರು. ಸೋಮವಾರ ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆನೋವು ಕಾಣಿಸಿಕೊಂಡಿತು. ಅಂಜಲಿ ತನ್ನ ಸ್ನೇಹಿತರನ್ನು ಕರೆದು ಪತಿಯನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಸೇರಿಸಿದರು. ನಂತರ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಬಳಿಕ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಪತಿಯ ಮರಣದ ಆಘಾತ ಸಹಿಸಲಾಗದೆ ಅಂಜಲಿ ಏಳನೇ ಮಹಡಿಯ ಬಾಲ್ಕನಿಗೆ ಧಾವಿಸಿ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಮುಂಜಾನೆ ಆಕೆಯೂ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‍ನಲ್ಲಿ ಕುಡುಕರ ಗಲಾಟೆ- ಓರ್ವನನ್ನು ತಳ್ಳಿ ಹತ್ಯೆಗೈದ

ಪತಿಯ ಮೃತದೇಹದ ಪಕ್ಕದಲ್ಲೇ ಕುಳಿದು ಅಂಜಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಂತರ ಆಕೆ ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿ ಕಡೆ ಓಡಿದಳು. ಕಟ್ಟಡದಿಂದ ಜಿಗಿಯಲು ಮುಂದಾಗಿದ್ದಾಳೆ ಎಂಬುದು ನನಗೆ ತಿಳಿಯಿತು. ನಾವು ಹೋಗಿ ಹಿಡಿದುಕೊಳ್ಳುವಷ್ಟರಲ್ಲಿ ಆಕೆ ಮಹಡಿಯಿಂದ ಕೆಳಗೆ ಜಿಗಿದುಬಿಟ್ಟಳು ಎಂದು ಅಭಿಷೇಕ್ ಸಂಬಂಧಿ ಬಬಿತಾ ನೊಂದು ನುಡಿದಿದ್ದಾಳೆ.

ಎದೆನೋವು ಎಂದು ಕುಸಿದು ಬಿದ್ದ ಅಭಿಷೇಕ್‌ನನ್ನು ಮೃಗಾಲಯದಿಂದ 20 ಕಿಮೀ ದೂರದಲ್ಲಿರುವ ಗುರು ತೇಗ್‌ ಬಹದ್ದೂರ್‌ ಆಸ್ಪತ್ರೆಗೆ ಸಾಗಿಸಿದೆವು. ಆದರೆ ವೈದ್ಯರು ಸಫ್ದರ್‌ಜಂಗ್‌ಗೆ ಕರೆದೊಯ್ಯಲು ಹೇಳಿದರು. ನಾವು ಅಲ್ಲಿಗೂ ತಲುಪಿದೆವು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮತ್ತೊಬ್ಬ ಸಂಬಂಧಿ ಸಂಜೀವ್‌ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಿಂದ ತಂದು ಅಕ್ರಮ ಸಾಗಾಟ – ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1 ಕೆಜಿ ಚಿನ್ನ ಸೀಜ್‌

Share This Article